ತಮ್ಮ ವೀಕ್ಷಕರನ್ನು ಎಂಗೇಜ್ ಮಾಡಲೆಂದು ನಟಿ ರಾಖಿ ಸಾವಂತ್ ಇನ್‌ಸ್ಟಾಗ್ರಾಂನಲ್ಲಿ ಆಗಾಗ ಲೈವ್ ಬರುತ್ತಿರುತ್ತಾರೆ ಎಂದು ಆಕೆಯ ಅಭಿಮಾನಿಗಳಿಗೆ ಗೊತ್ತಿದೆ.
ರಾಖಿ ಹೇಗೆ ಲೈವ್ ಚಾಟ್‌ಗಳ ಮೂಲಕ ತಮ್ಮ ಅಭಿಮಾನಿಗಳೊಂದಿಗೆ ಬೆರೆಯುತ್ತಾರೆ ಎಂಬುದನ್ನು ಮರುಸೃಷ್ಟಿಸಿರುವ ಮಿಮಿಕ್ರಿ ಕಲಾವಿದೆ ಅನಲೀ ಕೆರೆಜೋ ರೀಲ್ ಒಂದನ್ನು ಶೇರ್ ಮಾಡಿದ್ದಾರೆ.
’ಲೈವ್ ಫ್ರಂ ಲಾಲಿವುಡ್’ ಎಂದು ಕ್ಯಾಪ್ಷನ್ ನೀಡಲಾದ ಈ ರೀಲ್‌ನಲ್ಲಿ ಥೇಟ್ ರಾಖಿಯಂತೆಯೇ ’ಜೀಸಸ್’ ’ಮೈ ಗಾಡ್’ ಸೇರಿದಂತೆ ನಟಿ ಪದೇ ಪದೇ ಬಳಸುವ ಪದಗಳನ್ನು ಬಳಸಿಕೊಂಡು ರಿಪ್ಲೈ ಮಾಡುತ್ತಿದ್ದಾರೆ ಮಿಮಿಕ್ರಿ ಕಲಾವಿದೆ. ಇದರೊಂದಿಗೆ ರಾಖಿಯ ಟಿಪಿಕಲ್ ಸ್ಟೈಲ್‌ನಲ್ಲಿ ’ಐ ಲವ್ ಯೂ’ ಪ್ರತಿಕ್ರಿಯೆಯನ್ನೂ ಸಹ ಈಕೆ ಮರಸೃಷ್ಟಿಸಿದ್ದಾರೆ.
ಮಾಜಿ ನಟಿ ಹಾಗೂ ರಾಜಕಾರಣಿ ಜಯಾ ಬಚ್ಚನ್‌ರಂತೆಯೂ ಮಾತನಾಡುವ ಮೂಲಕ ವೈರಲ್ ಆಗಿದ್ದ ಅನಲೀ, ಉಶಾ ಉತುಪ್, ಅಲ್ಕಾ ಯಗ್ನಿಕ್, ಜಾಹ್ನವಿ ಕಪೂರ್ ಹಾಗೂ ಇನ್ನಿತರರ ಅನುಕರಣೆ ಮಾಡಿದ್ದಾರೆ.
https://youtu.be/F5tzvjDiU1o
https://youtu.be/xcGn4Ap3o0A
https://youtu.be/a8TQqJqkJuw