BIG NEWS : ಲಕ್ಷಗಟ್ಟಲೇ ಸಂಬಳವಿದ್ರೂ ಹಣದ ಹುಚ್ಚಿಗೆ ಬಿದ್ದ ‘ಟೆಕ್ಕಿ’ : ಬೆಂಗಳೂರಲ್ಲಿ ‘ಹೈಟೆಕ್ ವೇಶ್ಯಾವಾಟಿಕೆ’ ದಂಧೆ ಬಯಲು

ಬೆಂಗಳೂರು : ಲಕ್ಷಾಂತರ ರೂ. ಸಂಬಳ ಇದ್ರೂ ಹಣದ ಹುಚ್ಚಿಗೆ ಬಿದ್ದ ‘ಟೆಕ್ಕಿ’ ಯೊಬ್ಬ ‘ಹೈಟೆಕ್ ವೇಶ್ಯಾವಾಟಿಕೆ’ ದಂಧೆಯಲ್ಲಿ ಭಾಗಿಯಾದ ಘಟನೆ ರಾಜ್ಯ ರಾಜಧಾನಿ ಬೆಂಗಳೂರಲ್ಲಿ ಬೆಳಕಿಗೆ ಬಂದಿದೆ.ಹೌದು, ಟೆಕ್ಕಿಯ ಹೆಸರು ಗೋವಿಂದರಾಜು , ಓದಿದ್ದು ಬಿಇ, ಕೆಲಸ ಸಾಪ್ಟ್ ವೇರ್ ಇಂಜಿನಿಯರ್. ಆದರೆ ಈತ ಮಾಡಿದ ಕೆಲಸವೇ ಬೇರೆ…!

ಸಾಪ್ಟ್ ವೇರ್ ಇಂಜಿನಿಯರ್ ಅಂದರೆ ಕೇಳಬೇಕಾ..? ಲಕ್ಷಾಂತರ ಸಂಬಳ ಕೂಡ ಬರುತ್ತಿತ್ತು, ಬಂದ ಸಂಬಳವನ್ನು ಶೇರು ಅದು ಇದು ಅಂತ ತನ್ನ ಇನ್ನಿತರ ಚಟಗಳಿಗೆ ಸುರಿಯುತ್ತಿದ್ದನು. ಆದ್ದರಿಂದ ಹೆಚ್ಚು ಸಾಲ ಕೂಡ ಮಾಡಿಕೊಂಡಿದ್ದನು.

ಅಷ್ಟರಲ್ಲೇ ಗೆಳೆಯನೊಬ್ಬ ವೇಶ್ಯಾವಾಟಿಕೆಯಿಂದ ಒಳ್ಳೆ ದುಡ್ಡು ಮಾಡಬಹುದು. ಅದರಲ್ಲೂ ವಿದೇಶಿ ಮಹಿಳೆಯರಿಗೆ ಭಾರಿ ಡಿಮ್ಯಾಂಡ್ ಇದೆ ಎಂದು ತಲೆ ತುಂಬಿದ್ದನು. ಗೆಳೆಯನ ಮಾತು ಕೇಳಿ ಅಡ್ಡ ದಾರಿ ಹಿಡಿದ ಟೆಕ್ಕಿ ಒಂದು ಇದಕ್ಕಾಗಿಯೇ ಒಂದು ಆ್ಯಪ್ ಸೃಷ್ಟಿ ಮಾಡಿದ್ದನು . ಇದರ ಮೂಲಕ ತಮಗೆ ಈತ ತನಗೆ ಬೇಕಾದ ಮಹಿಳೆಯರನ್ನು ಮಾತ್ರ ಸೇರಿಸಿಕೊಳ್ತಿದ್ದನು. ಈ ಆ್ಯಪ್ ಮೂಲಕ ವಿದೇಶಿ ಮಹಿಳೆಯರನ್ನು ಸಂಪರ್ಕಿಸಿ , ಗಿರಾಕಿಗಳ ಬಳಿ ಕಳುಹಿಸುವ ಕೆಲಸ ಮಾಡ್ತಿದ್ದನು ಎನ್ನಲಾಗಿದೆ. ಅಷ್ಟರಲ್ಲೇ ಪುಲಕೇಶಿನಗರದಲ್ಲಿ ವಾಸವಾಗಿರುವ ಟರ್ಕಿ ದೇಶದ ಮಹಿಳೆ ಬಿಯೋನಾಜ್ (39). ಎಂಬ ಮಹಿಳೆ ಈತನ ಸಂಪರ್ಕಕ್ಕೆ ಬಂದಿದ್ದಾಳೆ. ಈಕೆ ಕೂಡ ಕಳೆದ 10 ವರ್ಷದಿಂದ ಈಕೆ ವೇಶ್ಯಾವಾಟಿಕೆಯಲ್ಲಿ ತೊಡಗಿರುವುದು ಬೆಳಕಿಗೆ ಬಂದಿದೆ.

ಒಟ್ಟಾರೆಯಾಗಿ ವೇಶ್ಯಾವಾಟಿಕೆಯಲ್ಲಿ ತೊಡಗಿದ್ದ ಟೆಕ್ಕಿ ಗೋವಿಂದರಾಜು, ವಿದೇಶಿ ಮಹಿಳೆ ಬಿಯಾನ್ಯಾಝ್ ಹಾಗೂ ಆಕೆಯ ಸಹಚರರಾದ ಒಡಿಶಾ ಮೂಲದ ಜಿತೇಂದ್ರ ಸಾಹೂ (43), ಪ್ರಮೋದ್ ಕುಮಾರ್ (31) ಸೇರಿದಂತೆ ಹಲವರನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳ ವಶದಲ್ಲಿದ್ದ 7 ವಿದೇಶಿ ಮಹಿಳೆಯರು ಸೇರಿ ಒಟ್ಟು 9 ಮಂದಿಯನ್ನು ರಕ್ಷಿಸಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read