ಬೇಸಿಗೆ ಬಿಸಿಲು: ಹಾಲು ಉತ್ಪಾದಕರಿಗೆ ʼಶಿಮುಲ್‌ʼ ನಿಂದ ಸಿಹಿ ಸುದ್ದಿ !

ಬೇಸಿಗೆಯಲ್ಲಿ ರಾಸುಗಳ ನಿರ್ವಹಣಾ ವೆಚ್ಚ ಹೆಚ್ಚಳವಾಗುವುದರಿಂದ ಹಾಲು ಉತ್ಪಾದನಾ ವೆಚ್ಚ ಏರಿಕೆಯಾಗಿ ಲಾಭಾಂಶ ಕಡಿಮೆಯಾಗುತ್ತದೆ. ಈ ಹೊತ್ತಿನಲ್ಲಿ ಹಾಲು ಉತ್ಪಾದಕರನ್ನು ಪ್ರೋತ್ಸಾಹಿಸಲು ಶಿವಮೊಗ್ಗ ಹಾಲು ಒಕ್ಕೂಟ (ಶಿಮುಲ್) ಹಾಲು ಖರೀದಿ ದರ ಹೆಚ್ಚಳಕ್ಕೆ ನಿರ್ಧರಿಸಿದೆ.

ಶಿಮುಲ್ ಆಡಳಿತ ಮಂಡಳಿ ಏಪ್ರಿಲ್ 1 ರಿಂದ ಪ್ರತಿ ಲೀಟರ್‌ಗೆ 4 ರೂಪಾಯಿ ಹೆಚ್ಚಳಗೊಳಿಸಲು ನಿರ್ಧರಿಸಿದೆ. ಶನಿವಾರ ನಡೆದ 455ನೇ ಆಡಳಿತ ಮಂಡಳಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಮಂಗಳವಾರದಿಂದ ಹಾಲು ಒಕ್ಕೂಟ ಸಂಘಗಳಿಂದ ಖರೀದಿಸುವ ಹಾಲಿಗೆ ಪ್ರತಿ ಕೆ.ಜಿಗೆ 36.26 ರೂಪಾಯಿ ದರ ನೀಡಿದರೆ, ಸಂಘದಿಂದ ಉತ್ಪಾದಕರಿಗೆ ನೀಡುವ ಪರಿಷ್ಕೃತ ದರ ಪ್ರತಿ ಲೀಟರ್‌ಗೆ 34.21 ರೂಪಾಯಿ ಇರಲಿದೆ ಎಂದು ಶಿಮುಲ್ ಆಡಳಿತ ಮಂಡಳಿ ಪ್ರಕಟಣೆ ತಿಳಿಸಿದೆ.

ಏಪ್ರಿಲ್ 1 ರಿಂದ ಶಿಮುಲ್ ಹಾಲು ಹಾಗೂ ಹಾಲಿನ ಉತ್ಪನ್ನಗಳ ಮಾರಾಟ ದರವೂ ಹೆಚ್ಚಳಗೊಳ್ಳಲಿದೆ. ಹಾಲು ಪ್ರತಿ ಲೀಟರ್‌ಗೆ 4 ರೂಪಾಯಿ ಹೆಚ್ಚಳಗೊಳ್ಳಲಿದೆ. ಪ್ರತಿ ಲೀಟರ್‌ಗೆ 42 ರೂಪಾಯಿ ಇರುವ ಟೋನ್ಸ್ ಹಾಲು 46 ರೂಪಾಯಿಗೆ ಏರಿಕೆಯಾಗಲಿದೆ. ಶುಭಂ ಸ್ಟ್ಯಾಂಡರ್ಡ್ ಹಾಲು 48 ರೂಪಾಯಿಯಿಂದ 52 ರೂಪಾಯಿಗೆ ಏರಿಕೆಯಾಗಲಿದೆ. ಮೊಸರು ಅರ್ಧ ಲೀಟರ್‌ಗೆ 26 ರೂಪಾಯಿಯಿಂದ 28 ರೂಪಾಯಿಗೆ ಏರಿಕೆಯಾಗಲಿದೆ. ಮೊಸರು 200 ಎಂಎಲ್ 12 ರೂಪಾಯಿಯಿಂದ 13 ರೂಪಾಯಿಗೆ ಹೆಚ್ಚಲಿದೆ. ಮಜ್ಜಿಗೆ ಪ್ರತಿ ಪ್ಯಾಕೆಟ್‌ಗೆ 9 ರೂಪಾಯಿಯಿಂದ 10 ರೂಪಾಯಿಗೆ ಹೆಚ್ಚಳಗೊಳ್ಳಲಿದೆ.

ಈ ದರ ಹೆಚ್ಚಳವು ಹಾಲು ಉತ್ಪಾದಕರಿಗೆ ಕೊಂಚ ಮಟ್ಟಿಗೆ ನೆರವಾಗಲಿದೆ. ಬೇಸಿಗೆಯಲ್ಲಿ ರಾಸುಗಳ ನಿರ್ವಹಣೆ ಕಷ್ಟಕರವಾಗುವುದರಿಂದ, ಈ ನಿರ್ಧಾರದಿಂದ ಅವರಿಗೆ ಆರ್ಥಿಕವಾಗಿ ಸ್ವಲ್ಪ ಸಹಾಯವಾಗಲಿದೆ. ಆದರೆ, ಮಾರಾಟ ದರ ಹೆಚ್ಚಳದಿಂದ ಗ್ರಾಹಕರಿಗೆ ಹೊರೆಯಾಗುವ ಸಾಧ್ಯತೆ ಇದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read