ಬೆಂಗಳೂರು: ಮೈಕ್ರೋ ಫೈನಾನ್ಸ್‌ಗಳ ಕಿರುಕುಳಕ್ಕೆ ಕಾನೂನಾತ್ಮಕ ಕಡಿವಾಣ ಹಾಕುವಲ್ಲಿ ನಾವು ಯಶಸ್ವಿಯಾಗಿದ್ದೇವೆ. ಫೆಬ್ರವರಿ ತಿಂಗಳಿನಲ್ಲಿ ಹೊಸ ಕಾನೂನು ಜಾರಿಯಾದ ನಂತರದಿಂದ ಫೈನಾನ್ಸ್ ಸಿಬ್ಬಂದಿಗಳ ದೌರ್ಜನ್ಯ ಪ್ರಕರಣಗಳ ಸಂಖ್ಯೆ ಗಣನೀಯ ಇಳಿಕೆಯಾಗಿದೆ, ಜೊತೆಗೆ ಆತ್ಮಹತ್ಯೆಗಳು ಕೂಡ ಕಡಿಮೆಯಾಗಿದೆ ಎಂದು ಸಿಎಂ ಸಿದ್ಧರಾಮಯ್ಯ ತಿಳಿಸಿದ್ದಾರೆ.
ಕರ್ನಾಟಕ ಕಿರುಸಾಲ ಮತ್ತು ಸಣ್ಣ ಸಾಲಗಳ ಬಲವಂತದ ಕ್ರಮಗಳ ಪ್ರತಿಬಂಧಕ ಕಾಯ್ದೆ ಆಧ್ಯಾದೇಶ -2025 ಮಾಡಿದ್ದು ನಾವೇ. ಇದರಲ್ಲಿ ಸಣ್ಣಪುಟ್ಟ ದೋಷಗಳಿರಬಹುದು. ಕಾಯ್ದೆಯೇ ಸರಿ ಇಲ್ಲ ಎನ್ನುವುದು ಸರಿಯಲ್ಲ. ಕಾಯ್ದೆ ಮಾಡುವ ಮೊದಲು ಮೈಕ್ರೋ ಫೈನಾನ್ಸ್ ಕಿರಕುಳದಿಂದ ಆತ್ಮಹತ್ಯೆ ಪ್ರಕರಣ ಹೆಚ್ಚಾಗಿತ್ತು, ಕ್ರಮೇಣ ಅದು ಕಡಿಮೆಯಾಗಿ ಶೂನ್ಯಕ್ಕೆ ತಲುಪಿದೆ ಎಂದು ಹೇಳಿದ್ದಾರೆ.
ಆತ್ಮಹತ್ಯೆ ನಿಲ್ಲಿಸಬೇಕೆನ್ನುವುದು ನಮ್ಮ ಉದ್ದೇಶವಾಗಿದೆ. ಇದರಲ್ಲಿ ಆತ್ಮಹತ್ಯೆ ಮಾಡಿಕೊಂಡವರಿಗೆ ಪರಿಹಾರ ನೀಡುವ ವ್ಯವಸ್ಥೆ ಇಲ್ಲ. ಸಾಲದಿಂದ ರೈತರು ಆತ್ಮಹತ್ಯೆ ಮಾಡಿಕೊಂಡ ಸಂದರ್ಭದಲ್ಲಿ ಸರ್ಕಾರದಿಂದ 5 ಲಕ್ಷ ರೂ. ಪರಿಹಾರ ನೀಡಲಾಗುವುದು. ಅದೇ ರೀತಿ ಫೈನಾನ್ಸ್ ಕಿರಕುಕುಳದಿಂದ ಆತ್ಮಹತ್ಯೆ ಮಾಡಿಕೊಂಡವರಿಗೆ 5 ಲಕ್ಷ ಪರಿಹಾರ ನೀಡುವ ಬಗ್ಗೆ ಹಣಕಾಸು ಇಲಾಖೆ, ಮುಖ್ಯ ಕಾರ್ಯದರ್ಶಿಗಳ ಜತೆ ಚರ್ಚೆ ನಡೆಸಿ ತೀರ್ಮಾನಿಸಲಾಗುವುದು. ಆತ್ಮಹತ್ಯೆ ತಡೆಯಲು ಕಿರುಸಾಲ, ಸಣ್ಣ ಸಾಲವನ್ನು ಶ್ಯೂರಿಟಿ ಇಲ್ಲದೇ ಬ್ಯಾಂಕ್ ಗಳಿಂದ ಕೊಡಿಸಬೇಕೆನ್ನುವ ಸಲಹೆಯನ್ನೂ ಪರಿಗಣಿಸಲಾಗುವುದು ಎಂದು ಹೇಳಿದ್ದಾರೆ.
ಮೈಕ್ರೋ ಫೈನಾನ್ಸ್‌ಗಳ ಕಿರುಕುಳಕ್ಕೆ ಕಾನೂನಾತ್ಮಕ ಕಡಿವಾಣ ಹಾಕುವಲ್ಲಿ ನಾವು ಯಶಸ್ವಿಯಾಗಿದ್ದೇವೆ. ಫೆಬ್ರವರಿ ತಿಂಗಳಿನಲ್ಲಿ ಹೊಸ ಕಾನೂನು ಜಾರಿಯಾದ ನಂತರದಿಂದ ಫೈನಾನ್ಸ್ ಸಿಬ್ಬಂದಿಗಳ ದೌರ್ಜನ್ಯ ಪ್ರಕರಣಗಳ ಸಂಖ್ಯೆ ಗಣನೀಯ ಇಳಿಕೆಯಾಗಿದೆ, ಜೊತೆಗೆ ಆತ್ಮಹತ್ಯೆಗಳು ಕೂಡ ಕಡಿಮೆಯಾಗಿದೆ. pic.twitter.com/i5WD0SUctr
— Siddaramaiah (@siddaramaiah) August 21, 2025