ಮೆಟ್ರೋ ಟ್ರೈನ್​ನಲ್ಲಿ ಅಂಕಲ್​ ಪುಶಪ್ಸ್; ವಿಡಿಯೋ ನೋಡಿ ಮೂಗಿನ ಮೇಲೆ ಬೆರಳಿಟ್ಟ ನೆಟ್ಟಿಗರು !

ಸಾಮಾಜಿಕ ಜಾಲತಾಣಗಳಲ್ಲಿ ಮೆಟ್ರೋಗೆ ಸಂಬಂಧಿಸಿದ ವಿಡಿಯೋಗಳು ಬರ್ತಾ ಇರುತ್ತೆ. ಈ ರೀತಿಯ ಕೆಲವು ವಿಡಿಯೋಗಳಲ್ಲಿ ಕೆಲವರು ದೆಹಲಿ ಮೆಟ್ರೋದೊಳಗೆ ಉಗುಳುವುದು, ಕೆಲವೊಮ್ಮೆ ವಿಚಿತ್ರವಾದ ಕೆಲಸಗಳನ್ನು ಮಾಡುವುದು ಕಂಡುಬರುತ್ತದೆ.

ಇದರ ಜೊತೆ ಜನರು ಮೆಟ್ರೋದೊಳಗೆ ಜಗಳವಾಡುತ್ತಿರುವ ವಿಡಿಯೋಗಳು ಸಹ ವೈರಲ್ ಆಗಿದ್ದು, ಅದನ್ನು ನೋಡಿ ನೆಟ್ಟಿಗರು ಎಂಜಾಯ್ ಮಾಡಿದ್ದು ಸಹ ಇದೆ. ಇತ್ತೀಚೆಗಷ್ಟೇ ಇದೇ ರೀತಿಯ ವಿಡಿಯೋವೊಂದು ಸಾಕಷ್ಟು ವೈರಲ್ ಆಗಿದ್ದು, ಅದರಲ್ಲಿ ಒಬ್ಬ ಹುಡುಗ ಮೆಟ್ರೋ ಕೋಚ್‌ನೊಳಗೆ ಪುಶ್‌ಅಪ್‌ಗಳನ್ನು ಮಾಡುತ್ತಿರುತ್ತಾನೆ. ಆದರೆ ಇದನ್ನು ನೋಡಿದ ಆತನ ಹಿಂದೆಯಿಂದ ವ್ಯಕ್ತಿಯೊಬ್ಬರು ಪುಶ್ ಅಪ್ ಚಾಲೆಂಜ್ ಮಾಡಿರೋದು ಎಲ್ಲರ ಗಮನ ಸೆಳೆದಿದೆ.

ಈ ವೀಡಿಯೋ ದೆಹಲಿ ಮೆಟ್ರೋದ್ದೇ ಅಥವಾ ಬೇರೆ ಯಾವುದಾದರೂ ನಗರದ್ದು ಎಂಬುದು ಇನ್ನೂ ಬಹಿರಂಗವಾಗಿಲ್ಲ. ವಿಡಿಯೋದಲ್ಲಿ, ಒಬ್ಬ ಹುಡುಗ ಮೊದಲು ಮೆಟ್ರೋ ಒಳಗೆ ಪುಷ್ಅಪ್ ಮಾಡಲು ಪ್ರಾರಂಭಿಸುತ್ತಾನೆ. ಈ ಮಧ್ಯೆ ಈ ರೀತಿ ಪುಶ್ ಅಪ್ ಮಾಡಲು ಆತನ ಹಿಂದೆ ನಿಂತಿದ್ದ ವ್ಯಕ್ತಿಗೆ ಕೇಳುತ್ತಾನೆ.

ಆದ್ರೆ ಅದನ್ನು ಅವರು ಮೊದಲು ನಿರಾಕರಿಸುತ್ತಾರೆ. ಆದರೆ ಹುಡುಗ ಮತ್ತೆ ಮಾತನಾಡಿದಾಗ, ಆ ವ್ಯಕ್ತಿ ಆ ಹುಡುಗನಿಗಿಂತ ವೇಗವಾಗಿ ಪುಶ್‌ಅಪ್ ಮಾಡಲು ಪ್ರಾರಂಭಿಸುತ್ತಾರೆ. ಇದನ್ನು ನೋಡಿ ಎಲ್ಲರಿಗೂ ಆಶ್ಚರ್ಯ ಆಗಿದೆ. ವೈರಲ್ ಆದ ವಿಡಿಯೋದಲ್ಲಿ ಇಬ್ಬರು ವ್ಯಕ್ತಿಗಳು ಒಬ್ಬರ ನಂತರ ಒಬ್ಬರು ಪುಶ್‌ಅಪ್ ಚಾಲೆಂಜ್ ಮಾಡುವುದನ್ನು ನೋಡಬಹುದು.

ಈ ವೀಡಿಯೊವನ್ನು ಸಾಮಾಜಿಕ ಮಾಧ್ಯಮ ಇನ್‌ಸ್ಟಾಗ್ರಾಮ್‌ನಲ್ಲಿ @bboybharatragathi ಹೆಸರಿನ ಖಾತೆಯೊಂದಿಗೆ ಹಂಚಿಕೊಳ್ಳಲಾಗಿದೆ. ಇದು ಸಾಕಷ್ಟು ವ್ಯೂವ್ಸ್ ಮತ್ತು ಬಹಳಷ್ಟು ಜನ ಲೈಕ್ ಮಾಡಿದ್ದಾರೆ. ವಿಡಿಯೋವನ್ನು ಶೇರ್ ಮಾಡುವಾಗ, ಪ್ರತಿಭಾವಂತರು ಎಲ್ಲೆಡೆ ಇದ್ದಾರೆ ಎಂಬ ಕ್ಯಾಪ್ಶನ್ ಬರೆಯಲಾಗಿದೆ. ‌

ಸೆಪ್ಟೆಂಬರ್ 4 ರಂದು ಶೇರ್ ಆಗಿರುವ ಈ ವಿಡಿಯೋಗೆ ಇದುವರೆಗೆ 25 ಲಕ್ಷಕ್ಕೂ ಹೆಚ್ಚು ವ್ಯೂವ್ಸ್ ಆಗಿದೆ. 3 ಲಕ್ಷಕ್ಕೂ ಹೆಚ್ಚು ಮಂದಿ ವಿಡಿಯೋವನ್ನು ಲೈಕ್ ಮಾಡಿದ್ದಾರೆ. ವಿಡಿಯೋ ನೋಡಿದ ಜನರು ಅದಕ್ಕೆ ವಿಭಿನ್ನ ಕಮೆಂಟ್ ಮಾಡುತ್ತಿದ್ದಾರೆ. ಒಬ್ಬರು ‘ಅಂಕಲ್ ಸರಿಯಾದ ರೀತಿಯಲ್ಲಿ ಪುಶ್‌ಅಪ್ ಮಾಡುತ್ತಿದ್ದಾರೆ’ ಎಂದು ಬರೆದರೆ, ಇನ್ನೊಬ್ಬರು ‘ಅಂಕಲ್ ಯಾವಾಗಲೂ ಈ ಕ್ಷಣಕ್ಕಾಗಿ ಕಾಯುತ್ತಿರುವಂತೆ ತೋರುತ್ತಿದೆ’ ಎಂದು ಬರೆದಿದ್ದಾರೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read