ಬೆಂಗಳೂರು: ನಮ್ಮ ಮೆಟ್ರೋ ಟ್ರ್ಯಾಕ್ ಗೆ ಜಿಗಿದು ಪ್ರಯಾಣಿಕನೊಬ್ಬ ಆತ್ಮಹತ್ಯೆಗೆ ಯತ್ನಿಸಿದ್ದು, ಮೆಟ್ರೋ ರೈಲಿನ ಅಡಿ ಸಿಲುಕಿ ಪರದಾಡಿದ ಘಟನೆ ಬೆಂಗಳೂರಿನ ನಾಡಪ್ರಭು ಕೆಂಪೇಗೌಡ ಮೆಟ್ರೋ ನಿಲ್ದಾಣದಲ್ಲಿ ನಡೆದಿದೆ.
ಇಂದು ಮಧ್ಯಾಹ್ನ 3:19ರ ಸುಮಾರಿಗೆ ಪ್ರಯಾಣಿಕ ಯುವಕನೊಬ್ಬ ಏಕಾಏಕಿ ಪ್ಲಾಟ್ ಫಾರಂ 3ರಲ್ಲಿ ಮೇಟ್ರೋ ಟ್ರ್ಯಾಕ್ ಗೆ ಹಾರಿದ್ದಾನೆ. ರೈಲಿನಡಿ ಸಿಲುಕಿಕೊಂಡು ಸಾವು-ಬದುಕಿನ ನಡುವೆ ಹೋರಾಟ ನಡೆಸಿದ್ದಾನೆ. ತಕ್ಷಣ ಮೆಟ್ರೋ ಸಿಬ್ಬಂದಿಗಳು, ರಕ್ಷಣಾ ತಂಡಗಳು ಕಾರ್ಯಪ್ರವೃತ್ತರಾಗಿ ಯುವಕನನ್ನು ರಕ್ಷಿಸಿದ್ದಾರೆ.
ಮಾದಾವರ- ರೇಷ್ಮೆ ಸಂಸ್ಥೆ ನಡುವಿನ ಹಸಿರು ಮಾರ್ಗದ ಮೆಟ್ರೋ ಲೈನ್ ನಲ್ಲಿ ಈ ಘಟನೆ ನಡೆದಿದೆ. 25 ವರ್ಷದ ಯುವಕ ಆತ್ಮಹತ್ಯೆಗೆ ಯತ್ನಿಸಿದವ. ಯುವಕ ಗಂಭೀರವಾಗಿ ಗಾಯಗೊಂಡಿದ್ದು, ಆತನ ಬಟ್ಟೆಗಳು ರಕ್ತಸಿಕ್ತವಾಗಿವೆ. ಸದ್ಯ ಯುವಕನನ್ನು ಆಂಬುಲೆನ್ಸ್ ಮೂಲಕ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆಯಿಂದಾಗಿ ಕೆಲ ಕಾಲ ಪ್ಲಾಟ್ ಫಾರಂ 3ರಲ್ಲಿ ಮೆಟ್ರೋ ಸಂಚಾರ ಸ್ಥಗಿತಗೊಳಿಸಲಾಯಿತು. ಸದ್ಯ ಯುವಕನ್ನನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲುಸಲಾಗಿದೆ.