ಕಾಮನಬಿಲ್ಲಿನ ಹಿನ್ನೆಲೆಯಲ್ಲಿ ಡಾಲ್ಫಿನ್​ ಹಾರಾಟ: ಕ್ಯಾಮೆರಾದಲ್ಲಿ ಸೆರೆಯಾಯ್ತು ಅತ್ಯದ್ಭುತ ದೃಶ್ಯ

ಡಾಲ್ಫಿನ್‌ಗಳ ಜಿಗಿತ ನೋಡುವುದೇ ಅಂದ. ಆದರೆ ಇನ್ನೂ ಅತ್ಯದ್ಭುತ ಎನ್ನುವ ವಿಡಿಯೋ ಒಂದು ವೈರಲ್​ ಆಗಿದ್ದು, ಅದು ನೆಟ್ಟಿಗರನ್ನು ಚಕಿತಗೊಳಿಸುವುದರ ಜೊತೆಗೆ ಉಲ್ಲಾಸಗೊಳಿಸುತ್ತದೆ.

‘ಸೈನ್ಸ್ ಗರ್ಲ್’ ಎಂಬ ಬಳಕೆದಾರರು ಈ ಕಿರು ಕ್ಲಿಪ್ ಶೇರ್​ ಮಾಡಿಕೊಂಡಿದ್ದಾರೆ. ಇದರಲ್ಲಿ ಸಮುದ್ರವನ್ನು ತೋರಿಸಲಾಗಿದೆ. ಅತ್ತ ಕಾಮನಬಿಲ್ಲಿನ ಚಿತ್ರಣ ನೋಡಬಹುದು. ಹಿನ್ನೆಲೆ ಮ್ಯೂಸಿಕ್​ ಹಾಕಲಾಗಿದೆ. ಆ ಕಾಮನ ಬಿಲ್ಲಿಗೆ ಸರಿಯಾಗಿ ಡಾಲ್ಫಿನ್​ ಹಾರುತ್ತದೆ.

ಕನಸಿನಲ್ಲಿ ಕಾಣುವ ದೃಶ್ಯದಂತೆ ಇದು ಗೋಚರಿಸುತ್ತದೆ. ಕಾಮನಬಿಲ್ಲಿನ ಹಿನ್ನೆಲೆಯಲ್ಲಿ ಡಾಲ್ಫಿನ್​ ಹಾರಿದ್ದನ್ನು ಸ್ಲೋ ಮೋಷನ್​ನಲ್ಲಿ ಹಿನ್ನೆಲೆ ಸಂಗೀತದೊಂದಿಗೆ ಶೇರ್​ ಮಾಡಲಾಗಿದೆ. ಪಶ್ಚಿಮ ಆಸ್ಟ್ರೇಲಿಯಾದ ಕರಾವಳಿಯಲ್ಲಿ ಛಾಯಾಗ್ರಾಹಕ ಜೈಮೆನ್ ಹಡ್ಸನ್ ಅವರು ವಿಡಿಯೋ ಸೆರೆ ಹಿಡಿದಿದ್ದಾರೆ.

ಈ, ಬೆರಗುಗೊಳಿಸುವ ವಿಡಿಯೋ ಇದಾಗಲೇ ಆರು ಲಕ್ಷಕ್ಕೂ ಹೆಚ್ಚು ವೀಕ್ಷಣೆ ಕಂಡಿದೆ. ಕಮೆಂಟ್​ ಬಾಕ್ಸ್​ ಬೆರಗಿನ ಕಮೆಂಟ್​ಗಳಿಂದ ತುಂಬಿ ಹೋಗಿದೆ.

https://twitter.com/gunsnrosesgirl3/status/1609853713300037632?ref_src=twsrc%5Etfw%7Ctwcamp%5Etweetembed%7Ctwterm%5E1609853713300037632%7Ctwgr%5E992fe612bf00b99298758dd4ae74666d0cb74aef%7Ctwcon%5Es1_&ref_url=https%3A%2F%2Fwww.ndtv.com%2Foffbeat%2Fmesmerising-video-shows-dolphins-stunning-leap-as-rainbow-emerges-3671222

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read