ಬೆಳಗಾವಿ: ಕನ್ನಡ ರಾಜ್ಯೋತ್ಸವ ದಿನದಂದು ಬೆಳಗಾವಿಯಲ್ಲಿ ಕರಾಳದಿನಾಚರಣೆ ನಡೆಸಿದ್ದ ಎಂಇಎಸ್ ಪುಂದಾಟ ಮೆರೆದಿದ್ದು, ನಿಷೇಧದ ನಡುವೆಯೂ ಮೆರವಣಿಗೆಯನ್ನು ಮಾಡಿದೆ. ಈ ಹಿನ್ನೆಲೆಯಲ್ಲಿ ಎಂಇಎಸ್ ಮುಖಂಡ ಶುಭಂ ಸೆಳಕೆಯನ್ನು ಪೊಲೀಸರು ಬಂಧಿಸಿದ್ದಾರೆ.
ಕರಾಳದಿನಾಚರಣೆ ಆಚರಿಸಲು ಬಂದಿದ್ದ ಎಂಇಎಸ್ ಮುಖಂಡ ಶುಭಂ ಸೆಳಕೆ ಜೊತೆ ನಿಂತು ಪೊಲೀಸ್ ಅಧಿಕಾರಿ ಕಾಲೇಮಿರ್ಚಿ ತೀವ್ರ ವಿವಾದಕ್ಕೆ ಕಾರಣರಾಗಿದ್ದರು. ಶುಭಂ ಸೆಳಕೆ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದ ಪೊಲೀಸ್ ಅಧಿಕಾರಿಯೇ ಕಾಲೇಮಿರ್ಚೆಯಿಂದಲೇ ಶುಭಂ ಬಂಧನವಾಗಿದೆ.
ಮಾಳಮಾರುತಿ ಠಾಣೆ ಸಿಪಿಐ ಜೆ.ಎಂ.ಕಾಲೆಮಿರ್ಚೆ, ಬೆಳಗಾವಿಗೆ ಕರಾಳದಿನಾಚರಣೆ ಮಾಡಲು ಬಂದ ಎಂಇಎಸ್ ಮುಖಂಡ ಶುಭಂ ಸೆಳಕೆ ಜೊತೆ ನಿಂತು ಸೆಲ್ಫಿ ಫೋಟೋ ತೆಗೆದುಕೊಂಡಿದ್ದತು. ಇದು ತೀವ್ರ ಆಕ್ರೋಶಕ್ಕೆ ವ್ಯಕ್ತವಾಗಿತ್ತು. ನಿಷೇಧದ ನಡುವೆಯೂ ಕರಾಳದಿನಾಚರಣೆ ಮಾಡಿರುವ ಹಿನ್ನೆಲೆಯಲ್ಲಿ ಎಂಇಎಸ್ ಮುಖಂಡ ಶುಭಂ ಸೆಳಕೆಯನ್ನು ಸಿಪಿಐ ಕಾಲೆಮಿರ್ಚೆ ಬಂಧಿಸಿದ್ದಾರೆ. ಬೆಳಗಾವಿಯಿಂದ ಎಸ್ಕೇಪ್ ಆಗುತ್ತಿದ್ದ ಶುಭಂ ಸೆಳಕೆಯನ್ನು ಗೋವಾವೇಸ್ ಮಾರ್ಗದಲ್ಲಿ ಮಾಳಮಾರುತಿ ಠಾಣೆ ಪೊಲೀಸರು ಚೇಸ್ ಮಾಡಿ ಬಂಧಿಸಿದ್ದಾರೆ.
