ಬೆಂಗಳೂರು: ಭಾರತ ಸರ್ಕಾರದ ಅಂಚೆ ಸಚಿವಾಲಯದ ಉಲ್ಲೇಖಿತ ಅಧಿಕೃತ ಜ್ಞಾಪನದಲ್ಲಿ ಅಂಚೆ ಇಲಾಖೆಯು ತನ್ನ ಅಂಚೆ ಉತ್ಪನ್ನಗಳ ಸೇವೆಯನ್ನು ಅಭಿವೃದ್ಧಿಗೊಳಿಸುವ ಕಾರ್ಯವನ್ನು ಕೈಗೊಳ್ಳುತ್ತಿದ್ದು, ಅದರಂತೆ, ದಿನಾಂಕ:01.08.2025 ರಿಂದ ನೋಂದಾಯಿತ ಅಂಚೆ ಸೇವೆಯನ್ನು ಕಾರ್ಯಚರಣೆಯ ದಕ್ಷತೆ, ಟ್ಯಾಕಿಂಗ್ ಸಾಮರ್ಥ್ಯ ಮತ್ತು ಗ್ರಾಹಕರ ಅನುಕೂಲತೆಯನ್ನು ಸುಧಾರಣೆಗೊಳಿಸುವುದಕ್ಕಾಗಿ, ಸಂವಹನದ ಅಗತ್ಯತೆಗಳು ಮತ್ತು ತಾಂತ್ರಿಕ ಪುಗತಿಗೆ ಅನುಗುಣವಾಗಿ ‘ಸ್ಪೀಡ್ –ಪೋಸ್ಟ್’ ಸೇವೆಯಲ್ಲಿ ವಿಲೀನಗೊಳಿಸುತ್ತಿದೆ.
ಆದ್ದರಿಂದ, ಸಚಿವಾಲಯದ ಎಲ್ಲಾ ಇಲಾಖೆಗಳು/ ಮುಖ್ಯಮಂತ್ರಿಯವರ ಸಚಿವಾಲಯ/ ಸಚಿವರ ಆಪ್ತ ಶಾಖೆಗಳು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ(ಸಾಮಾನ್ಯ ರವಾನೆ) ಶಾಖೆಗೆ ಕಳುಹಿಸುವ ನೋಂದಾಯಿತ ಅಂಚೆ ಲಕೋಟೆಗಳ ಮೇಲೆ ಇನ್ನು ಮುಂದೆ ನೋಂದಾಯಿತ ಅಂಚೆ(Register post/RPAD) ಎಂಬುದರ ಬದಲಾಗಿ ತುರ್ತು ಅಂಚೆ(Speed Post) ಎಂದು ನಮೂದಿಸುವಂತೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಸರ್ಕಾರದ ಅಧೀನ ಕಾರ್ಯದರ್ಶಿ ಎನ್. ತಿಪ್ಪೇಸ್ವಾಮಿ ತಿಳಿಸಿದ್ದಾರೆ.
