ʼಮೆಂತೆ ಕಾಳುʼ ಕಾಪಾಡುತ್ತೆ ಆರೋಗ್ಯ

ಎಲ್ಲರ ಅಡುಗೆಮನೆಯಲ್ಲಿ ಇದ್ದೇ ಇರುವ ವಸ್ತುಗಳಲ್ಲಿ ಮೆಂತೆ ಕಾಳು ಕೂಡಾ ಒಂದು. ಇದರಿಂದ ಎಷ್ಟೆಲ್ಲಾ ಪ್ರಯೋಜನಗಳಿವೆ ಎಂಬುದು ನಿಮಗೆ ತಿಳಿದಿದೆಯೇ?

ನಿಮಗೆ ಮಲಬದ್ಧತೆ ಸಮಸ್ಯೆ ಇದ್ದರೆ ಹಿಂದಿನ ರಾತ್ರಿ ಮೆಂತೆ ಕಾಳನ್ನು ನೀರಿನಲ್ಲಿ ನೆನೆಸಿ. ಮರುದಿನ ಬೆಳಗ್ಗೆ ಅದನ್ನು ನೀರು ಸಹಿತ ಸೇವಿಸಿ. ಇದರಿಂದ ಜೀರ್ಣಕ್ರಿಯೆ ಸರಾಗವಾಗುತ್ತದೆ ಮತ್ತು ದೇಹದಲ್ಲಿರುವ ವಿಷಕಾರಿ ಅಂಶಗಳು ಹೊರಹೋಗುತ್ತವೆ.

ರಕ್ತದ ಸಕ್ಕರೆ ಪ್ರಮಾಣವನ್ನು ನಿಯಂತ್ರಿಸುವುದರಿಂದ ಇದು ಮಧುಮೇಹಿಗಳಿಗೂ ಹೇಳಿ ಮಾಡಿಸಿದ ಮದ್ದು. ಇದರಲ್ಲಿ ನೈಸರ್ಗಿಕವಾಗಿ ಕರಗುವ ಫೈಬರ್ ಇದ್ದು ಇದು ರಕ್ತ ಸಕ್ಕರೆ ಹೀರುವ ವೇಗವನ್ನು ಕಡಿಮೆ ಮಾಡುತ್ತದೆ.

ಗ್ಯಾಸ್ಟ್ರಿಕ್ ನಿಂದ ಎದೆಯುರಿ ಸಮಸ್ಯೆ ಇದ್ದರೂ ನೀವು ಮೆಂತೆಯನ್ನು ಸೇವಿಸಬಹುದು. ಖಾಲಿ ಹೊಟ್ಟೆಗೆ ಒಂದಿಷ್ಟು ಮೆಂತೆ ಕಾಳನ್ನು ಜಗಿಯುವುದರಿಂದ ಅಸಿಡಿಟಿ ದೂರವಾಗುತ್ತದೆ ಮಾತ್ರವಲ್ಲ ದೇಹ ತೂಕವೂ ಕಡಿಮೆಯಾಗುತ್ತದೆ.

ಮೆಂತೆ ಪುಡಿಯನ್ನು ನಿಂಬೆರಸ ಮತ್ತು ಜೇನಿನಲ್ಲಿ ಬೆರೆಸಿ ಸೇವಿಸಿದರೆ ಜ್ವರ ಕಡಿಮೆಯಾಗುತ್ತದೆ. ಮೆದುಳಿನ ಕ್ರೀಯಾಶೀಲತೆಗೂ ಇದು ಸಹಕಾರಿ. ಕಿಡ್ನಿಯ ಆರೋಗ್ಯವೂ ಉತ್ತಮವಾಗಿರಬೇಕಾದರೆ ನಿತ್ಯ ಅರ್ಧ ಚಮಚದಷ್ಟು ಮೆಂತೆ ಸೇವಿಸಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read