BIG NEWS: ಮಹಿಳೆಯರಿಗೆ ವೇತನ ಸಹಿತ ಮುಟ್ಟಿನ ರಜೆ ಘೋಷಿಸಿದ ಸರ್ಕಾರ

ಭುವನೇಶ್ವರ: ಮಹಿಳೆಯರು ತಮ್ಮ ಮಾಸಿಕ ರಜೆಯ ದಿನಗಳಲ್ಲಿ ಅನುಭವಿಸುವ ನೋವು, ಸಂಕಷ್ಟ, ಯಾತನೆ ಹೇಳತೀರದು. ಇಂತಹ ಸಂದರ್ಭಗಳಲ್ಲಿ ಮಹಿಳೆಯರಿಗೆ ಮುಟ್ಟಿನ ರಜೆ ನೀಡಬೇಕು ಎಂಬ ಆಗ್ರಹಗಳು, ಒತ್ತಾಯಗಳು ಕೇಳಿ ಬರುತ್ತಲೇ ಇದೆ. ಇದೀಗ ಒಡಿಶಾ ಸರ್ಕಾರ ಮಹಿಳೆಯರಿಗೆ ಮುಟ್ಟಿನ ರಜೆ ಘೋಷಣೆ ಮಾಡಿ ಆದೇಶ ಹೊರಡಿಸಿದೆ.

78ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಮಹಿಳೆಯರಿಗೆ ವೇತನ ಸಹಿತ (ಪಿಎಂಎಲ್) ಮುಟ್ಟಿನ ರಜೆಯನ್ನು ಒಡಿಶಾ ಸರ್ಕಾರ ಘೋಷಿಸಿದೆ.

ಈ ರಜೆಯನ್ನು ಮಹಿಳೆಯರು ಮುಟ್ಟಿನ ಮೊದಲ ಅಥವಾ ಎರಡನೇ ದಿನದಂದು ಒಂದು ದಿನ ತೆಗೆದುಕೊಳ್ಳಬಹುದು. ಈ ರಜೆ ಐಚ್ಚಿಕವಾಗಿರಲಿದ್ದು, ಮಹಿಳೆಯರು ಅಗತ್ಯವಿದ್ದರೆ ರಜೆ ತೆಗೆದುಕೊಳ್ಳಲೂ ಬಹುದು, ರಜೆ ತೆಗೆದುಕೊಳ್ಳದೆಯೂ ಇರಬಹುದು.

ಈ ಬಗ್ಗೆ ಒಡಿಶಾ ಉಪಮುಖ್ಯಮಂತ್ರಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಪ್ರವತಿ ಪರಿದಾ ತಿಳಿಸಿದ್ದಾರೆ. ಕೀನ್ಯಾದಲ್ಲಿ ವಿಶ್ವಸಂಸ್ಥೆಯ ಸಿವಿಲ್ ಸೊಸೈಟಿ ಕಾನ್ಸರೆನ್ಸ್ 2024ರಲ್ಲಿ ಭಾಗವಹಿಸಿದ್ದ ಒಡಿಶಾ ಬಾಲಕಿಯೊಬ್ಬಳು ವೇತನ ಸಹಿತ ಮುಟ್ಟಿನ ರಜೆ ನೀಡಬೇಕು ಎಂಬ ವಿಷಯದ ಕುರುತು ಮಾತನಾಡಿದ್ದಳು. ಮಹಿಳಾ ಹೋರಾಟಗಾರ್ತಿ ರಂಜಿತಾ ಪ್ರಿಯದರ್ಶಿನಿ ಕೂಡ ಈ ಬಗ್ಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಧ್ವನಿ ಎತ್ತಿದ್ದರು. ಈ ಬೆಳವಣಿಗೆ ಬೆನ್ನಲ್ಲೇ ಒಡಿಶಾ ಸರ್ಕಾರ ಮಹಿಳೆಯರಿಗೆ ಮುಟ್ಟಿನ ರಜೆ ಘೋಷಣೆ ಮಾಡಿದೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read