ಪುರುಷರಿಗೂ ಇರಬೇಕು ತಮ್ಮʼಗುಪ್ತಾಂಗʼ ದ ಸ್ವಚ್ಛತೆ ಬಗ್ಗೆ ಕಾಳಜಿ……!

ಮಹಿಳೆಯರು ತಮ್ಮ ಗುಪ್ತಾಂಗದ ನೈರ್ಮಲ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಲೇಬೇಕು. ಆದ್ರೆ ಪುರುಷರಿಗೆ ಇದರ ಅಗತ್ಯವಿದೆಯೋ ಇಲ್ವೋ ? ಪುರುಷರು ಕೂಡ ಗುಪ್ತಾಂಗಗಳ ಸ್ವಚ್ಛತೆ ಬಗ್ಗೆ ಗಮನಹರಿಸಬೇಕೋ ಬೇಡವೋ ಅನ್ನೋದು ಎಲ್ಲರನ್ನೂ ಕಾಡುವ ಪ್ರಶ್ನೆ.

ಜನನಾಂಗದ ಪ್ರದೇಶವು ದೇಹದ ಇತರ ಭಾಗಗಳಿಗಿಂತ ಹೆಚ್ಚು ಸೂಕ್ಷ್ಮವಾಗಿರುತ್ತದೆ. ಹಾಗಾಗಿ ಪುರುಷರು ಕೂಡ ಪ್ರತ್ಯೇಕವಾಗಿ ಈ ಭಾಗವನ್ನು ಸ್ವಚ್ಛಗೊಳಿಸಿಕೊಳ್ಳಲೇಬೇಕು. ಲೈಂಗಿಕ ಸುರಕ್ಷತೆ ಮತ್ತು ಆರೋಗ್ಯಕ್ಕಾಗಿ ಇದು ಅತ್ಯಂತ ಅವಶ್ಯಕ. ಗುಪ್ತಾಂಗಗಳನ್ನು ಸರಿಯಾಗಿ ಸ್ವಚ್ಛ ಮಾಡದೇ ಇದ್ದಲ್ಲಿ ದುರ್ವಾಸನೆ, ತುರಿಕೆ, ದದ್ದು, ಮೊಡವೆಗಳು ಮತ್ತು ಬೆವರುವಿಕೆಗೆ ಕಾರಣವಾಗಬಹುದು.

ಗುಪ್ತಾಂಗವನ್ನು ತೊಳೆಯುವುದು ಮಾತ್ರವಲ್ಲ, ಇನ್ನೂ ಕೆಲವು ಅಂಶಗಳನ್ನು ಪುರುಷರು ಗಮನದಲ್ಲಿಟ್ಟುಕೊಳ್ಳಬೇಕು. ಇಂಟಿಮೇಟ್‌ ವಾಷ್‌ ಬಗ್ಗೆ ಪ್ರತಿಯೊಬ್ಬರಿಗೂ ಗಮನವಿರಬೇಕಾದದ್ದು ಅತ್ಯಗತ್ಯ. ಇಲ್ಲದೇ ಇದ್ದರೆ ಕೊಳಕು ಮತ್ತು ಬೆವರು ಶೇಖರಣೆಯಾಗಿ ದುರ್ವಾಸನೆ ಬರುತ್ತದೆ. ಶಿಶ್ನ ಸೋಂಕುಗಳಿಗೆ ಕಾರಣವಾಗುತ್ತದೆ. ಆದ್ದರಿಂದ ಪುರುಷರು ಸೌಮ್ಯವಾದ ಮತ್ತು ಅಷ್ಟೇ ಪರಿಣಾಮಕಾರಿಯಾದ ಇಂಟಿಮೇಟ್‌ ವಾಷ್‌ ಬಳಸುವುದು ಉತ್ತಮ. ಸಾಬೂನಿನಿಂದ ಖಾಸಗಿ ಪ್ರದೇಶವನ್ನು ಶುಚಿಗೊಳಿಸುವುದು ಸೂಕ್ತವಲ್ಲ.

– ನಿಮ್ಮ ನಿತ್ಯ ಕರ್ಮದ ಬಳಿಕ ಇಂಟಿಮೇಟ್‌ ವಾಶ್‌ ಬಳಸಿ ಗುಪ್ತಾಂಗಗಳನ್ನು ಸ್ವಚ್ಛ ಮಾಡಿಕೊಳ್ಳಿ.

– ಇದರಿಂದ ಸೋಂಕು ಮತ್ತು ತುರಿಕೆಯಿಂದ ಪಾರಾಗಬಹುದು.

– ಅನಪೇಕ್ಷಿತ ವಾಸನೆಯನ್ನು ತಡೆಯುತ್ತದೆ ಮತ್ತು ತಾಜಾತನ ಮೂಡುತ್ತದೆ.

– ಇಂಟಿಮೇಟ್ ವಾಶ್, ಗುಪ್ತಾಂಗದಲ್ಲಿನ ಪ್ರದೇಶದಲ್ಲಿ ಕಿರಿಕಿರಿ ಮತ್ತು ಉರಿಯೂತವನ್ನು ಕಡಿಮೆ ಮಾಡುತ್ತದೆ.

ಅತ್ಯಂತ ಸೌಮ್ಯವಾದ ಇಂಟಿಮೇಟ್‌ ವಾಷ್‌ ಅನ್ನು ಆಯ್ಕೆ ಮಾಡಿಕೊಳ್ಳಿ. ಅದರಲ್ಲಿ ಅಪಾಯಕಾರಿ ರಾಸಾಯನಿಕಗಳು ಇರಬಾರದು. ಸುಗಂಧ ಹಾಗೂ ಕೃತಕ ಬಣ್ಣಗಳಿಂದ ತಯಾರಾಗಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಿ. ಪ್ರಯಾಣ ಮಾಡುವ ಸಂದರ್ಭದಲ್ಲಿ ಗುಪ್ತಾಂಗಗಳನ್ನು ಸ್ವಚ್ಛ ಮಾಡಲು ಪ್ರತ್ಯೇಕ ವೈಪ್ಸ್‌ ಬಳಸಿ. ಹತ್ತಿಯ, ಮೆತ್ತನೆಯ ಒಳ ಉಡುಪನ್ನೇ ಧರಿಸಿ.

ಇದಲ್ಲದೆ ಖಾಸಗಿ ಅಂಗದ ನೈರ್ಮಲ್ಯವನ್ನು ಕಾಪಾಡಿಕೊಳ್ಳಲು ಟ್ರಿಮ್ಮಿಂಗ್, ಶೇವಿಂಗ್ ಮತ್ತು ಕ್ಲೆನ್ಸಿಂಗ್ ಅನ್ನು ಬಳಸುವುದು ಸಹ ಅಗತ್ಯ. ದೇಹದ ಉಳಿದ ಭಾಗಗಳಂತೆ, ಖಾಸಗಿ ಭಾಗಗಳಿಗೆ ಸಮಾನವಾದ ಗಮನ ಮತ್ತು ಕಾಳಜಿಯ ಅಗತ್ಯವಿರುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read