ಉತ್ತರಾಖಂಡದ ಅಲ್ಮೋರಾದಲ್ಲಿ ಎಸ್‌ಯುವಿ ಮೂಲಕ, ವೇಗವಾಗಿ ಹರಿಯುತ್ತಿದ್ದ ರಾಮಗಂಗಾ ನದಿಯನ್ನು ದಾಟಲು ಯತ್ನಿಸಿದ ಮೂವರು ಯುವಕರು ಅಪಾಯಕಾರಿ ಸನ್ನಿವೇಶ ಎದುರಿಸಿದ್ದಾರೆ.
ಸಾಮಾಜಿಕ ಮಾಧ್ಯಮದಲ್ಲಿ ಈ ಅನಿರೀಕ್ಷಿತ ಘಟನೆಯ ಆಘಾತಕಾರಿ ವಿಡಿಯೋ ವೈರಲ್ ಆಗಿದ್ದು ಎದೆನಡುಗಿಸಿದೆ. ನದಿ ಮಧ್ಯೆ ಅಪಾಯಕ್ಕೆ ಸಿಲುಕಿದ ಯುವಕರು ದೆಹಲಿ-ಎನ್‌ಸಿಆರ್ ಪ್ರದೇಶದಿಂದ ಬಂದವರು ಎಂದು ತಿಳಿದುಬಂದಿದೆ.
ವಿಡಿಯೋ ಪೋಸ್ಟ್ ಪ್ರಕಾರ ಮೂವರು ತಮ್ಮ ಮಹೀಂದ್ರ ಥಾರ್ ಎಸ್‌ಯುವಿಯನ್ನು ನದಿಯಲ್ಲಿ ಚಲಾಯಿಸಿದ್ದಾರೆ. ಇತ್ತೀಚೆಗೆ ಸುರಿದ ಭಾರೀ ಮಳೆಯಿಂದ ವಾಹನ ನದಿ ನೀರಲ್ಲಿ ಸಿಲುಕಿಕೊಂಡಿದೆ. ಎಷ್ಟೇ ಪ್ರಯತ್ನಿಸಿದರೂ ಮುಂದೆ ಚಲಿಸಲಾಗದೇ ಯುವಕರು ನದಿ ಮಧ್ಯದಲ್ಲಿ ಸಿಲುಕಿಹಾಕಿಕೊಂಡರು. ಬಳಿಕ ಅವರು ಪ್ರಾಣ ರಕ್ಷಣೆಗಾಗಿ ಎಸ್ ಯು ವಿ ಮೇಲೆ ಏರಿ ಕೂರುತ್ತಾರೆ.
ನದಿ ದಡದಲ್ಲಿ ನಿಂತಿದ್ದ ರಕ್ಷಣಾ ತಂಡ ಹಗ್ಗದ ಸಹಾಯದಿಂದ ಅವರನ್ನು ರಕ್ಷಿಸಿದೆ. ಆದರೆ ನದಿಯ ಮಧ್ಯೆ ಅಪಾಯದಲ್ಲಿ ಸಿಲುಕಿ ಪ್ರಾಣರಕ್ಷಣೆಗಾಗಿ ಪರದಾಡಿದ ಈ ವಿಡಿಯೋ ಎದೆನಡುಗಿಸುತ್ತೆ.
https://twitter.com/GreaterNoidaW/status/1709153734016618848?ref_src=twsrc%5Etfw%7Ctwcamp%5Etweetembed%7Ctwterm%5E1709153734016618848%7Ctwgr%5E5cd0aeb4568c04cd4fe412c1de2788077fb255a2%7Ctwcon%5Es1_&ref_url=https%3A%2F%2Fwww.ndtv.com%2Foffbeat%2F3-men-enter-fast-flowing-uttarakhand-river-in-a-thar-then-this-happens-4446410