ದಲಿತ ಯುವಕನನ್ನು ಅರೆಬೆತ್ತಲೆಗೊಳಿಸಿ ಮನಬಂದಂತೆ ಹಲ್ಲೆ; ಶಾಕಿಂಗ್ ವಿಡಿಯೋ ವೈರಲ್

ಹುಡುಗಿ ಹೆಸರಿನಲ್ಲಿ ಕರೆ ಮಾಡಿ ದಲಿತ ಯುವಕನನ್ನು ಕರೆಯಿಸಿಕೊಂಡಿದ್ದ ದುಷ್ಕರ್ಮಿಗಳ ಗುಂಪೊಂದು ಆತನನ್ನು ಅರೆಬೆತ್ತಲೆಗೊಳಿಸಿ ಮನಬಂದಂತೆ ಥಳಿಸಿರುವ ಘಟನೆ ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯಲ್ಲಿ ನಡೆದಿದ್ದು, ಈ ಕುಕೃತ್ಯದ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಪ್ರಸಾದ್ ಖೈರ್ನಾರ್ ಎಂಬ ಈ ಯುವಕನನ್ನು ಹುಡುಗಿ ತರ ಕರೆ ಮಾಡಿದಂತೆ ನಟಿಸಿ ದುಷ್ಕರ್ಮಿಗಳ ಗುಂಪು ನಾಸಿಕ್ ನ ಯಾವ್ಲಾ ಮಾರ್ಕೆಟ್ ಸಮೀಪ ಕರೆಸಿಕೊಂಡು ಬಳಿಕ ಅಪಹರಿಸಿದೆ. ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಆತನನ್ನು ಅರೆ ಬೆತ್ತಲೆಗೊಳಿಸಲಾಗಿದೆ.

ಇಷ್ಟಕ್ಕೆ ಸುಮ್ಮನಾಗದ ಈ ಗುಂಪು ಆತನ ಮೇಲೆ ಮನ ಬಂದಂತೆ ಥಳಿಸಿದ್ದು, ಜೊತೆಗೆ ತಮ್ಮ ಮೊಬೈಲ್ ನಲ್ಲಿ ವಿಡಿಯೋ ರೆಕಾರ್ಡ್ ಮಾಡಿಕೊಂಡಿದೆ. ಅಷ್ಟೇ ಅಲ್ಲ ಈ ವಿಡಿಯೋವನ್ನು ವೈರಲ್ ಮಾಡಬೇಕೆಂದು ಅವರವರೇ ಮಾತನಾಡಿಕೊಂಡಿದ್ದಾರೆ.

ಈ ಘಟನೆ ಹಲವು ದಿನಗಳ ಹಿಂದೆಯೇ ನಡೆದಿದ್ದರೂ ಸಹ ಪ್ರಾಣ ಭಯದಿಂದ ಪ್ರಸಾದ್ ಯಾರ ಬಳಿಯೂ ಹೇಳಿಕೊಂಡಿರಲಿಲ್ಲ. ಯಾವಾಗ ಈ ವಿಡಿಯೋ ವೈರಲ್ ಆಯಿತೋ ಆಗ ತನಿಖೆಗೆ ಮುಂದಾದ ಪೊಲೀಸರು ಇದೀಗ ಕೃತ್ಯದ ಸಂಪೂರ್ಣ ಮಾಹಿತಿ ಪಡೆದು ಆರೋಪಿಗಳ ಬಂಧನಕ್ಕೆ ಮುಂದಾಗಿದ್ದಾರೆ.

https://twitter.com/ItsKhan_Saba/status/1810544286892736655?ref_src=twsrc%5Etfw%7Ctwcamp%5Etweetembed%7Ctwterm%5E1810544286892736655%7Ctwgr%5Eeff2f194b2cbccd14ca5e1401a3a50f881e005e1%7Ctwcon%5Es1_&ref_url=https%3A%2F%2Fm.dailyhunt.in%2Fnews%2Findia%2Fenglish%2Ftopindiannews-epaper-dh90d0f8f90ef3441695ffc4a0a4a51e7c%2Fmenabductdalityouthcalledbygirlfriendtomeetbrutallyassaulthimvideogoesviral-newsid-n621299286

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read