ಬ್ಯಾನರ್ ಹಾಕುವ ವಿಚಾರವಾಗಿ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ ಮತ್ತು ಬಿಜೆಪಿ ನಡುವೆ ಮಾರಾಮಾರಿ ನಡೆದಿದೆ. ಆದರೆ ಇದರಲ್ಲಿ ಇಸಲಿ ವಿಷಯ ಹೊರಬಿದ್ದಿದ್ದು ಮೂರು ತಿಂಗಳ ಹಿಂದೆ ಬಿಜೆಪಿಗೆ ಸೇರ್ಪಡೆಗೊಂಡ ಪಕ್ಷದ ಮಾಜಿ ಸದಸ್ಯನ ಮೇಲೆ ಹಲ್ಲೆ ನಡೆಸಿದ ಆರೋಪದಲ್ಲಿ ಸಿಎಂ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆಯ ಏಳು ಸದಸ್ಯರ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.
ಭಾನುವಾರ ಮುಂಜಾನೆ, ದಹಿಸರ್ ಪೂರ್ವದ ಅಶೋಕ್ವಾನ್‌ನಲ್ಲಿ ಗುಡಿ ಪಾಡ್ವಾ ಶುಭಾಶಯ ಕೋರಿ ಬ್ಯಾನರ್ ಹಾಕಿದ್ದನ್ನ ವಿರೋಧಿಸಿ ಶಿವಸೇನೆಯ ಮಾಜಿ ಸದಸ್ಯನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ಎಫ್‌ಐಆರ್ ದಾಖಲಿಸಿರುವ ದಹಿಸರ್ ಪೊಲೀಸರ ಪ್ರಕಾರ, ಶಿವಸೇನೆ ಪಕ್ಷದ ಆಂತರಿಕ ಸಂಘರ್ಷದ ಹಿನ್ನೆಲೆಯಲ್ಲಿ ದೂರುದಾರ ಭಿಭೀಶನ್ ವೇರ್ ಮತ್ತು ಅವರ ಸಹೋದ್ಯೋಗಿ ನವನಾಥ್ ನಾವಡ್ಕರ್ ಇತ್ತೀಚಿಗೆ ಬಿಜೆಪಿಗೆ ಸೇರ್ಪಡೆಗೊಂಡಿದ್ದರು.
ಗುಡಿ ಪಾಡ್ವಾ ಉತ್ಸವ ಹಿನ್ನೆಲೆಯಲ್ಲಿ ಅಶೋಕ್ ವನ-ದಹಿಸರ್ ಪೂರ್ವ ರಸ್ತೆಯಲ್ಲಿ ನವನಾಥ್ ನಾವಡ್ಕರ್ ಅವರು ಶುಭ ಹಾರೈಕೆಗಳೊಂದಿಗೆ ಬ್ಯಾನರ್‌ಗಳನ್ನು ಹಾಕಿದರು. ಆದರೆ ಶಿವಸೇನೆಯ ಮುಖಂಡ ಪ್ರಕಾಶ್ ಸುರ್ವೆ ಬ್ಯಾನರ್ ಗಳನ್ನು ತೆಗೆದು ಹಾಕಿದರು.
ಈ ವೇಳೆ ಉಭಯ ಪಕ್ಷಗಳ ನಡುವೆ ವಾಗ್ವಾದ ನಡೆದು ದೈಹಿಕ ಹಲ್ಲೆಗಳಾಯಿತು. ಪೊಲೀಸರು ಹಲ್ಲೆ ಮತ್ತು ಕ್ರಿಮಿನಲ್ ಬೆದರಿಕೆ ಆರೋಪದ ಮೇಲೆ ಐಪಿಸಿಯ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ.
https://twitter.com/Diwakar_singh31/status/1637693093976895488?ref_src=twsrc%5Etfw%7Ctwcamp%5Etweetembed%7Ctwterm%5E1637693093976895488%7Ctwgr%5E575a4075bc844d29f47164d69f8cbeddfe9100a0%7Ctwcon%5Es1_&ref_url=https%3A%2F%2Fwww.freepressjournal.in%2Fmumbai%2Fon-camera-members-of-shinde-sena-assault-bjp-worker-in-dahisar-after-dispute-over-banner-placement