ಆಗಸ್ಟ್ 15ಕ್ಕೆ ಬಿಡುಗಡೆಯಾಗುತ್ತಿದೆ ‘ಬ್ಲ್ಯಾಕ್ ಶೀಪ್’ ಚಿತ್ರದ ಮೆಲೋಡಿ ಗೀತೆ

ತನ್ನ ಶೀರ್ಷಿಕೆಯಿಂದಲೇ ಸಾಕಷ್ಟು ನಿರೀಕ್ಷೆ ಮೂಡಿಸಿರುವ ‘ಬ್ಲ್ಯಾಕ್ ಶೀಪ್’ ಚಿತ್ರದ ‘ಹೃದಯವೇ’ ಎಂಬ ಮೆಲೋಡಿ ಹಾಡು ಇದೇ ಆಗಸ್ಟ್ 15 ರಂದು ಯುಟ್ಯೂಬ್ ನಲ್ಲಿ ಬಿಡುಗಡೆಯಾಗುತ್ತಿದೆ. ಈ ಕುರಿತು ಚಿತ್ರತಂಡ ಸೋಶಿಯಲ್ ಮೀಡಿಯಾದಲ್ಲಿ ಘೋಷಣೆ ಮಾಡಿದೆ.

ಜೀವನ್ ಹಳ್ಳಿಕಾರ್ ನಿರ್ದೇಶನದ ಈ ಚಿತ್ರದಲ್ಲಿ ವಿಶಾಲ್ ಕಿರಣ್ ಸೇರಿದಂತೆ ಪ್ರಶಾಂತ್ ವಿ ಹರಿ, ಶಿವಂಗಿ ಡೇವಿ, ನಿಶಾ ಹೆಗಡೆ, ಕೆ ಎಸ್ ಶ್ರೀಧರ್, ಕೃಷ್ಣ ಹೆಬ್ಬಾಳೆ, ಸುಂದರ್ ವೀಣಾ, ಭಜರಂಗಿ ಪ್ರಸನ್ನ ಬಣ್ಣ ಹಚ್ಚಿದ್ದಾರೆ. ಗ್ಲಿಟರರ್ಸ್ ಸ್ಟಾರ್ ಹೌಸ್  ಬ್ಯಾನರ್ ನಲ್ಲಿ ಅಶ್ವಿನಿ ಗುರು ಚರಣ್ ನಿರ್ಮಾಣ ಮಾಡಿದ್ದು, ಮಂಜುನಾಥ್ ಪಿ ರಾವ್ ಸಹ ನಿರ್ಮಾಪಕರಾಗಿ ಕೆಲಸ ಮಾಡಿದ್ದಾರೆ. ಸಿದ್ದಾರ್ಥ್ ಕಾಮತ್ ಸಂಗೀತ ಸಂಯೋಜನೆ ನೀಡಿದ್ದಾರೆ. ಆಕಾಶ್ ಮಹೇಂದ್ರ ಕಾರ್ ಅವರ ಸಂಕಲನವಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read