ವಾಲ್‌ಮಾರ್ಟ್‌ನ ಉತ್ತರಾಧಿಕಾರಿ ಆಲಿಸ್ ವಾಲ್ಟನ್ ವಿಶ್ವದ ಅತ್ಯಂತ ಶ್ರೀಮಂತ ಮಹಿಳೆ ಅಂತಾ ಹ್ಯೂರೂನ್ ಗ್ಲೋಬಲ್ ರಿಚ್ ಲಿಸ್ಟ್ 2025 ಹೇಳಿದೆ. ಆಲಿಸ್ ವಾಲ್ಟನ್ 102 ಬಿಲಿಯನ್ ಡಾಲರ್ (8 ಲಕ್ಷ ಕೋಟಿ ರೂ. ಗಿಂತ ಹೆಚ್ಚು) ಆಸ್ತಿ ಹೊಂದಿದ್ದಾರೆ. ಕಳೆದ ವರ್ಷ ವಾಲ್‌ಮಾರ್ಟ್ ಷೇರುಗಳ ಬೆಲೆ ಹೆಚ್ಚಿದ್ದರಿಂದ ಅವರ ಆಸ್ತಿ ಶೇಕಡಾ 46 ರಷ್ಟು ಹೆಚ್ಚಾಗಿದೆ.
ಆಲಿಸ್ ವಾಲ್ಟನ್ ವಾಲ್‌ಮಾರ್ಟ್ ಕಂಪನಿಯಲ್ಲಿ ದೊಡ್ಡ ಜವಾಬ್ದಾರಿ ವಹಿಸಿಲ್ಲ. ಬದಲಿಗೆ, ಅವರು ತಮ್ಮ ಸ್ವಂತ ಉದ್ಯಮ ಮತ್ತು ಕಲೆ, ಕುದುರೆಗಳಂತಹ ಆಸಕ್ತಿಗಳ ಮೇಲೆ ಗಮನ ಕೊಟ್ಟಿದ್ದಾರೆ.
ಕಲೆ ಸಂಗ್ರಹಿಸುವುದು ಮತ್ತು ಕುದುರೆಗಳನ್ನು ಸಾಕುವುದರಲ್ಲಿ ಆಲಿಸ್ ವಾಲ್ಟನ್‌ಗೆ ತುಂಬಾ ಆಸಕ್ತಿ ಇದೆ. ಅವರಿಗೆ 10 ವರ್ಷ ವಯಸ್ಸಿದ್ದಾಗಲೇ ಪಿಕಾಸೊ ಚಿತ್ರಕಲೆಯ ಪ್ರತಿಕೃತಿ ಖರೀದಿಸಿ ಕಲೆ ಸಂಗ್ರಹಿಸುವುದಕ್ಕೆ ಶುರು ಮಾಡಿದರು. ಆಂಡಿ ವಾರ್ಹೋಲ್, ನಾರ್ಮನ್ ರಾಕ್ವೆಲ್ ಮತ್ತು ಜಾರ್ಜಿಯಾ ಓ’ಕೀಫ್ ಅವರಂತಹ ದೊಡ್ಡ ಕಲಾವಿದರ ಮೂಲ ಕೃತಿಗಳನ್ನು ಖರೀದಿಸಿ 500 ಮಿಲಿಯನ್ ಡಾಲರ್ (4,000 ಕೋಟಿ ರೂ. ಗಿಂತ ಹೆಚ್ಚು) ಮೌಲ್ಯದ ಕಲಾ ಸಂಗ್ರಹ ಮಾಡಿದ್ದಾರೆ.
2011 ರಲ್ಲಿ, ಅರ್ಕಾನ್ಸಾಸ್‌ನ ಬೆಂಟನ್‌ವಿಲ್ಲೆಯಲ್ಲಿ ಕ್ರಿಸ್ಟಲ್ ಬ್ರಿಡ್ಜಸ್ ಮ್ಯೂಸಿಯಂ ಆಫ್ ಅಮೇರಿಕನ್ ಆರ್ಟ್ ಅನ್ನು ಸ್ಥಾಪಿಸಿದರು.
ವಿಶ್ವದ ಟಾಪ್ 5 ಶ್ರೀಮಂತ ಮಹಿಳೆಯರು:
- ಆಲಿಸ್ ವಾಲ್ಟನ್ (102 ಬಿಲಿಯನ್ ಡಾಲರ್)
- ಫ್ರಾಂಕೋಯಿಸ್ ಬೆಟ್ಟೆನ್‌ಕೋರ್ಟ್ ಮೇಯರ್ಸ್ (67 ಬಿಲಿಯನ್ ಡಾಲರ್)
- ಜುಲಿಯಾ ಕೋಚ್ ಮತ್ತು ಕುಟುಂಬ (60 ಬಿಲಿಯನ್ ಡಾಲರ್)
- ಜಾಕ್ವೆಲಿನ್ ಮಾರ್ಸ್ (53 ಬಿಲಿಯನ್ ಡಾಲರ್)
- ರೋಶ್ನಿ ನಾಡಾರ್ ಮತ್ತು ಕುಟುಂಬ (40 ಬಿಲಿಯನ್ ಡಾಲರ್)