ಆರು ತಿಂಗಳ ಮಗುವನ್ನು ‘ಬಾಸ್ ಬೇಬಿ’ ಯಂತೆ ಮಾಡಿದ ಅಮ್ಮ: ವಿಡಿಯೋ ವೈರಲ್

ನೀವು ಬಾಸ್ ಬೇಬಿ ಚಲನಚಿತ್ರಗಳನ್ನು ವೀಕ್ಷಿಸಿದ್ದರೆ, ಗೋಲ್ಡನ್ ವಾಚ್‌ಗಳು ಮತ್ತು ಇತರ ಪರಿಕರಗಳೊಂದಿಗೆ ಮಕ್ಕಳು ವಯಸ್ಕರಂತೆ ಕಾಣುವ ತಂತ್ರವನ್ನು ನೋಡಬಹುದು. ಆದರೆ ನಿಜ ಬದುಕಿನಲ್ಲಿ ಅದು ಸಾಧ್ಯವಿಲ್ಲ ಎನ್ನುವುದು ಎಲ್ಲರಿಗೂ ತಿಳಿದದ್ದೇ. ಹಾಗೆಂದು ದೊಡ್ಡವರಂತೆ ಡ್ರೆಸ್​ ಮಾಡಬಹುದಲ್ಲವೆ? ಚಿಕ್ಕಮಕ್ಕಳಿಗೆ ದೊಡ್ಡವರಂತೆ ಅಪ್ಪ-ಅಮ್ಮ ಡ್ರೆಸ್​ ಮಾಡುವುದು ಕೂಡ ಹೊಸ ವಿಷಯವೇನಲ್ಲ.

ಆದರೆ ಈಗ ವೈರಲ್​ ಆಗಿರುವ ವಿಡಿಯೋ ಒಂದರಲ್ಲಿ ತಾಯಿಯೊಬ್ಬರು ಬಾಸ್ ಬೇಬಿ ಚಲನಚಿತ್ರದಿಂದ ಸ್ಫೂರ್ತಿ ಪಡೆದಂತೆ ತೋರುತ್ತಿದೆ. ಇದೇ ಕಾರಣಕ್ಕೆ ತನ್ನ ಮಗುವಿಗೆ ಟ್ಯಾಟೂಗಳನ್ನು ಮತ್ತು ಚಿನ್ನದ ಸರಗಳನ್ನು ಧರಿಸಿ, ಅವನನ್ನು ಬಾಸ್‌ ಬೇಬಿಯಂತೆ  ಕಾಣುವಂತೆ ಮಾಡಿದ್ದಾರೆ.

ಶಮೆಕಿಯಾ ಮೋರಿಸ್ ಎಂಬ ಮಹಿಳೆ ತಮ್ಮ ಆರು ತಿಂಗಳ ಮಗುವಿಗೆ ನಕಲಿ ಹಚ್ಚೆ ಹಾಕಿ ಫೋಟೋ ಶೂಟ್​ ಮಾಡಿಸಿದ್ದಾರೆ. ಫ್ಲೋರಿಡಾ ಮೂಲದ ಫ್ಯಾಷನ್ ಡಿಸೈನರ್ ಆಗಿರುವ ಶಮೇಕಿಯಾ, ಮಗುವನ್ನು ಈ ರೀತಿಯಲ್ಲಿ ಅಲಂಕರಿಸಿ ಖುಷಿ ಪಟ್ಟಿದ್ದಾರೆ. ಶಿಶುವಿನ ಸೂಕ್ಷ್ಮ ದೇಹದ ಮೇಲೆ, ನೀವು ಸಾಕಷ್ಟು ಸೃಜನಶೀಲ ಹಚ್ಚೆಗಳನ್ನು ನೋಡುತ್ತೀರಿ. ಇದರ ಜೊತೆಗೆ, ಶಮೇಕಿಯಾ ಚಿನ್ನ ಮತ್ತು ಬೆಳ್ಳಿಯ ಬಳೆ ಮತ್ತು ಸರಪಳಿಯಿಂದ ಮಗುವನ್ನು ತುಂಬಾ ಫ್ಯಾಶನ್ ಆಗಿ ಕಾಣುವಂತೆ ಮಾಡಿದ್ದಾರೆ.

ಒಂದು ವರ್ಗದ ಜನರು ಇದನ್ನು ಇಷ್ಟಪಟ್ಟರೂ, ಹಲವರು ಇಷ್ಟು ಚಿಕ್ಕ ಮಗುವಿಗೆ ಹೀಗೆಲ್ಲಾ ಮಾಡಿರುವುದಕ್ಕೆ ಆಕ್ರೋಶ ಹೊರಹಾಕಿದ್ದಾರೆ. ನಾನು ಎಲ್ಲರ ದ್ವೇಷವನ್ನೂ ಪ್ರೀತಿಸುತ್ತೇನೆ ಎಂದು ಶಮೆಕಿಯಾ ಉತ್ತರಿಸಿದ್ದಾರೆ.

https://twitter.com/LechieBai/status/1616224376642310146

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read