ಇಲ್ಲಿದೆ ‘ವಂದೇ ಭಾರತ್ ಎಕ್ಸ್‌ ಪ್ರೆಸ್’ ಚಾಲನೆ ಮಾಡಿದ ಭಾರತದ ಮೊದಲ ಮಹಿಳೆ ಸಾಧನೆಯ ಕಥೆ

ಮುಂಬೈ: ಏಷ್ಯಾದ ಮೊದಲ ಮಹಿಳಾ ಲೋಕೋ ಪೈಲಟ್ ಸುರೇಖಾ ಯಾದವ್ ಅವರು ಹೊಸದಾಗಿ ಪರಿಚಯಿಸಲಾದ ಸೆಮಿ-ಹೈ ಸ್ಪೀಡ್ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲನ್ನು ನಿರ್ವಹಿಸಿದ ಮೊದಲ ಮಹಿಳಾ ಲೋಕೋ ಪೈಲಟ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈ ಕುರಿತು ಕೇಂದ್ರ ರೈಲ್ವೆ ಸಚಿವಾಲಯ ಮಾಹಿತಿ ನೀಡಿದೆ.

ಪಶ್ಚಿಮ ಮಹಾರಾಷ್ಟ್ರದ ಸತಾರಾ ಮೂಲದವರಾಗಿರುವ ಸುರೇಖಾ ಯಾದವ್ ಅವರು 1988 ರಲ್ಲಿ ಭಾರತದ ಮೊದಲ ಮಹಿಳಾ ರೈಲು ಚಾಲಕರಾದರು. ಇಲಾಖೆಯಲ್ಲಿ ಅವರು ಸಲ್ಲಿಸಿರುವ ಸೇವೆ ಮತ್ತು ಸಾಧನೆಗಾಗಿ ಈವರೆಗೆ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಹಲವು ಪ್ರಶಸ್ತಿಗಳನ್ನು ಪಡೆದಿದ್ದಾರೆ.

ವಂದೇ ಭಾರತ್ ಎಕ್ಸ್‌ಪ್ರೆಸ್‌ನ ಮೊದಲ ಮಹಿಳಾ ಲೋಕೋ ಪೈಲಟ್ ಆಗುವ ಮೂಲಕ ಸುರೇಖಾ ಯಾದವ್ ತಮ್ಮ ಕೇಂದ್ರ ರೈಲ್ವೆಯ ಹಿರಿಮೆಗೆ ಮತ್ತೊಂದು ಗರಿಯನ್ನು ಮೂಡಿಸಿಕೊಂಡಿದ್ದಾರೆ ಎಂದು ಕೇಂದ್ರ ರೈಲ್ವೆ ಹೇಳಿದೆ. ಮುಂಬೈನ ಸೊಲ್ಲಾಪುರ ನಿಲ್ದಾಣ ಮತ್ತು ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ ನಡುವೆ ಸೆಮಿ ಹೈಸ್ಪೀಡ್ ರೈಲನ್ನು ಸುರೇಖಾ ಯಾದವ್ ಅವರು ಚಾಲನೆ ಮಾಡಿದರು. 450-ಕಿಮೀ ದೂರದ ಪ್ರಯಾಣವನ್ನು ಪೂರ್ಣಗೊಳಿಸಿದ ನಂತರ, ಸುರೇಖಾ ಯಾದವ್ ಅವರನ್ನು ಸನ್ಮಾನಿಸಲಾಯಿತು.

ಅತ್ಯಾಧುನಿಕ ವಂದೇ ಭಾರತ್ ರೈಲು ಚಾಲನೆಯ ಮೊದಲ ಅನುಭವದ ಬಗ್ಗೆ ಸುರೇಖಾ ಯಾದವ್ ಅವರನ್ನು ಕೇಳಿದಾಗ, “ವಂದೇ ಭಾರತ್ ವೇಗದ ರೈಲು, ಸುಧಾರಿತ ತಂತ್ರಜ್ಞಾನವನ್ನು ಹೊಂದಿದೆ. ಆದ್ದರಿಂದ ಸಾಂಪ್ರದಾಯಿಕ ರೈಲುಗಳಿಗೆ ಹೋಲಿಸಿದರೆ ಹೆಚ್ಚು ಜಾಗರೂಕತೆಯ ಅಗತ್ಯವಿದೆ. ವಂದೇ ಭಾರತ್ ರೈಲನ್ನು ಚಲಾಯಿಸಲು ನೀಡಿದ ಅವಕಾಶಕ್ಕಾಗಿ ಅವರು ಕೃತಜ್ಞತೆ” ಎಂದು ಹೇಳಿದ್ದಾರೆ.

https://twitter.com/AshwiniVaishnaw/status/1635295400042323973?ref_src=twsrc%5Etfw%7Ctwcamp%5Etweetembed%7Ctwterm%5E1635295400042323973%7Ctwgr%5E389124c7524a8899e1e324ab2d0bfc27426b9bba%7Ctwcon%5Es1_&ref_url=https%3A%2F%2Fwww.indiatoday.in%2Findia%2Fstory%2Fsurekha-yadav-asia-first-woman-loco-pilot-first-female-operate-vande-bharat-express-2346462-2023-03-14

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read