ಸಂಭಾವನೆಯಲ್ಲಿ ಖಾನ್‌ತ್ರಯರು, ಟಾಲಿವುಡ್ ದಿಗ್ಗಜರನ್ನೂ ಹಿಂದಿಕ್ಕಿದ್ದಾರೆ ಈ ತಮಿಳು ನಟ

ಭಾರತೀಯ ಸಿನಿ ರಂಗದ ಅತ್ಯಂತ ಶ್ರೀಮಂತ ಸಂಸ್ಥೆ ಎಂಬ ಹೆಗ್ಗಳಿಕೆಗೆ ಬಾಲಿವುಡ್‌ನಿಂದ ಬಲು ಬೇಗ ಜಾರಿ ಹೋಗುತ್ತಿದ್ದು, ತೆಲುಗು ಹಾಗೂ ತಮಿಳು ಚಿತ್ರರಂಗಗಳು ತಂತಮ್ಮ ಸೂಪರ್‌ಸ್ಟಾರ್‌ಗಳಿಗೆ ಭಾರೀ ಮೊತ್ತದ ಸಂಭಾವನೆ ನೀಡುವ ಮೂಲಕ ಸುದ್ದಿ ಮಾಡುತ್ತಿದೆ.

ಅತ್ಯಂತ ಹೆಚ್ಚು ಸಂಭಾವನೆ ಪಡೆಯುವ ಭಾರತೀಯ ನಟ ಎಂದಾಕ್ಷಣ ನಮಗೆ ಖಾನ್‌ತ್ರಯರು, ಅಕ್ಷಯ್ ಕುಮಾರ್‌, ಅಮಿತಾಭ್ ಬಚ್ಚನ್ ನೆನಪಾಗುತ್ತಾರೆ. ಇವರ ಬಳಿಕ ತೆಲುಗಿನ ಅಲ್ಲು ಅರ್ಜುನ್, ರಾಮ್ ಚರಣ್, ಜೂ ಎನ್‌ಟಿಆರ್‌, ಪ್ರಭಾಸ್ ಸಹ ನೆನಪಿಗೆ ಬರುತ್ತಾರೆ. ತಮಿಳಿನಲ್ಲಿ ಆಗಾಗ ದೊಡ್ಡ ಪಿಚ್ಚರ್‌ಗಳೊಂದಿಗೆ ಕಾಣಿಸಿಕೊಳ್ಳುವ ರಜನಿಕಾಂತ್‌ ಸಹ ಭಾರೀ ವೇತನ ಪಡೆಯುವ ಮೂಲಕ ಸುದ್ದಿ ಮಾಡುತ್ತಾರೆ.

ಆದರೆ ಇವರೆಲ್ಲರನ್ನೂ ಹಿಂದಿಕ್ಕಿರುವ ಕಾಲಿವುಡ್‌ನ ಸೂಪರ್‌ಸ್ಟಾರ್‌ ಜೋಸೆಫ್ ವಿಜಯ್‌ ತಮ್ಮ ಹೊಸ ಚಿತ್ರಕ್ಕೆ 200 ಕೋಟಿ ರೂ.ಗಳ ಸಂಭಾವನೆ ಪಡೆಯುವ ಮೂಲಕ ಹೊಸ ದಾಖಲೆ ಬರೆದಿದ್ದಾರೆ. ತಮಿಳು ಚಿತ್ರರಂಗದಲ್ಲಿ 27 ವರ್ಷಗಳ ಅನುಭವಿಯಾಗಿರುವ 48ರ ಹರೆಯದ ವಿಜಯ್‌ ಇದುವರೆಗೂ 66 ಚಿತ್ರಗಳಲ್ಲಿ ನಟಿಸಿದ್ದಾರೆ.

ಎಜಿಎಸ್‌ ಎಂಟರ್‌ಟೇನ್ಮೆಂಟ್ ಬ್ಯಾನರ್‌ನಲ್ಲಿ ನಿರ್ಮಾಣವಾಗುತ್ತಿರುವ ’ತಲಪತಿ 68’ ಚಿತ್ರದಲ್ಲಿ ವಿಜಯ್‌ ವೆಂಕಟ್ ಪ್ರಭು ಜೊತೆಗೆ ಕೆಲಸ ಮಾಡುವ ಸಾಧ್ಯತೆ ಇದೆ.

ಸದ್ಯ ವಿಜಯ್‌ ತಮ್ಮ ಮುಂಬರುವ ಚಿತ್ರ ’ಲಿಯೋ’ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ. ತೃಷಾ ಕೃಷ್ಣನ್ ಹಾಗೂ ಸಂಜಯ್ ದತ್ ಚಿತ್ರದ ಪ್ರಮುಖ ತಾರಾಗಣದಲ್ಲಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read