ಸಾಮಾಜಿಕ ಜಾಲತಾಣಗಳಲ್ಲಿ ಇತ್ತೀಚೆಗೆ ವಿಡಿಯೋ ಒಂದು ವೈರಲ್ ಆಗಿದ್ದು, ಇದರಲ್ಲಿ ಯುವತಿಯೊಬ್ಬಳು ತುಂಡುಡುಗೆ ತೊಟ್ಟು ದೆಹಲಿ ಮೆಟ್ರೋದಲ್ಲಿ ಸಂಚರಿಸುತ್ತಿರುವುದು ಕಂಡುಬಂದಿತ್ತು.
ಇದನ್ನು ಸೋಶಿಯಲ್ ಮೀಡಿಯಾದಲ್ಲಿ ಹಾಕಿದ್ದ ಬಳಕೆದಾರರೊಬ್ಬರು, ಈಕೆ ಊರ್ಫಿಯಲ್ಲ ಎಂದು ಕ್ಯಾಪ್ಷನ್ ನೀಡುವ ಮೂಲಕ ತನ್ನ ವಸ್ತ್ರಗಳಿಂದಲೇ ಸದಾ ಸುದ್ದಿಯಲ್ಲಿರುವ ಬಾಲಿವುಡ್ ನಟಿ ಊರ್ಫಿ ಜಾವೇದ್ ಗೆ ಹೋಲಿಸಿದ್ದರು.
ಇದೀಗ ದೆಹಲಿ ಮೆಟ್ರೋದಲ್ಲಿ ಪ್ರಯಾಣಿಸಿದ್ದ ಯುವತಿಯ ಕುರಿತು ಮಾಹಿತಿ ಬಹಿರಂಗವಾಗಿದ್ದು, ರಿಥಂ ಚನಾನಾ ಎಂಬ ಹೆಸರಿನ ಈಕೆ ವಿಡಿಯೋ ಕುರಿತಂತೆ ಪ್ರತಿಕ್ರಿಯಿಸಿ, ನಾನಿರೋದೇ ಹೀಗೆ. ನನಗಿಷ್ಟ ಬಂದ ಉಡುಪನ್ನು ನಾನು ಧರಿಸುತ್ತೇನೆ. ಬೇರೆಯವರು ಏನೆಂದುಕೊಳ್ಳುತ್ತಾರೆ ಎಂಬುದನ್ನು ಯೋಚಿಸಲು ಹೋಗುವುದಿಲ್ಲ ಎಂದಿದ್ದಾರೆ.
ಅಲ್ಲದೆ ನಾನಿದನ್ನು ಪ್ರಚಾರಕ್ಕೆ ಮಾಡುತ್ತಿಲ್ಲ ಎಂದು ಅವರು ಹೇಳಿದ್ದು, ನನ್ನಿಷ್ಟದ ಬಟ್ಟೆ ಧರಿಸಲು ನನಗೆ ಸ್ವಾತಂತ್ರವಿದೆ ಎಂದಿದ್ದಾರೆ. ಇನ್ನೂ ಈ ಕುರಿತಂತೆ ಪ್ರತಿಕ್ರಿಸಿರುವ ದೆಹಲಿ ಮೆಟ್ರೋ, ಅವರಿಷ್ಟದ ಬಟ್ಟೆ ಧರಿಸುವುದು ಪ್ರತಿಯೊಬ್ಬರ ಹಕ್ಕು. ಆದರೆ ಇದರಿಂದ ಇತರರಿಗೆ ಮುಜುಗರ ಉಂಟಾಗಬಾರದು ಎಂದು ಹೇಳಿದೆ.
https://twitter.com/NCMIndiaa/status/1641809431649468416?ref_src=twsrc%5Etfw%7Ctwcamp%5Etweetembed%7Ctwterm%5E1641809431649468416%7Ctwgr%5E1f141491975269558b0d490f8707518830e16a28%7Ctwcon%5Es1_&ref_url=https%3A%2F%2Fkannadadunia.com%2Flive-news%2Fon-camera-girl-wearing-bra-and-mini-skirt-spotted-in-delhi-metro-netizens-react%2F