ಸಾಮಾಜಿಕ ಜಾಲತಾಣದಲ್ಲಿ ನಗ್ನ ಚಿತ್ರ ಪೋಸ್ಟ್; ಎಐ ಮೂಲಕ ಹಣ ಗಳಿಕೆಗೆ ದಾರಿ ಕಂಡುಕೊಂಡ ಯುವತಿ

ಕೃತಕ ಬುದ್ಧಿಮತ್ತೆ (ಎಐ) ಮೂಲಕ ಚಿತ್ರಗಳನ್ನು ಬಿಡಿಸುವ ತಂತ್ರಜ್ಞಾನದ ದುರ್ಬಳಕೆಗಳ ವ್ಯಾಪಕ ದೂರುಗಳ ಹಿನ್ನೆಲೆಯಲ್ಲೇ, ರೆಡ್ಡಿಟ್‌ನಲ್ಲಿ ತನ್ನ ನಗ್ನ ಚಿತ್ರಗಳನ್ನು ಮಾರಿಕೊಳ್ಳುತ್ತಿರುವ 19ರ ಬಾಲೆಯೊಬ್ಬಳು ಇದೇ ಎಐನ ಸೃಷ್ಟಿ ಎಂದು ತಿಳಿದು ಬಂದಿದೆ.

ಕ್ಲೌಡಿಯಾ ಹೆಸರಿನ ಈ ಕೃತಕ ಬುದ್ಧಿಯ ಸೃಷ್ಟಿಯ ಬಾಲೆ, ಸಾಮಾಜಿಕ ಜಾಲತಾಣ ರೆಡ್ಡಿಟ್‌ನ ಖಾತೆಯೊಂದರ ಮೂಲಕ ತನ್ನ ನಗ್ನ ಚಿತ್ರಗಳನ್ನು ಪೋಸ್ಟ್ ಮಾಡುವ ಮೂಲಕ ನೆಟ್ಟಿಗರಲ್ಲಿ ಭಾರೀ ಪ್ರತಿಕ್ರಿಯೆಗಳಿಗೆ ಕಾರಣಳಾಗಿದ್ದಾಳೆ.

ಮಹಿಳೆಯೊಬ್ಬರ ಫೋಟೋಗಳನ್ನು ಬಳಸಿಕೊಂಡು $500 ಸಂಪಾದಿಸಿದ ವ್ಯಕ್ತಿಯೊಬ್ಬನನ್ನು ಕಂಡ ಕಂಪ್ಯೂಟರ್‌ ಶಿಕ್ಷಣದ ವಿದ್ಯಾರ್ಥಿಗಳಿಬ್ಬರು ತಮಾಷೆಗೆಂದು ಮೊದಲಿಗೆ ಈ ಕೆಲಸಕ್ಕೆ ಮುಂದಾಗಿದ್ದಾರೆ. ಮೊದಲಿಗೆ ಈ ಎಐ ಸೃಷ್ಟಿತ ಫೋಟೋಗಳನ್ನು ಮಾರುವ ಮೂಲಕ $100 ಸಂಪಾದಿಸಿದ್ದಾರೆ ಈ ವಿದ್ಯಾರ್ಥಿಗಳು.

ಎಐ ಸೃಷ್ಟಿತ ಪೋರ್ನ್ ಉದ್ಯಮವೂ ದಿನೇ ದಿನೇ ಚಿಗುರೊಡೆಯುತ್ತಿದ್ದು, ಈ ವಿಚಾರವಾಗಿ ಪರ-ವಿರೋಧದ ಚರ್ಚೆಗಳು ಎಲ್ಲೆಡೆ ವ್ಯಕ್ತವಾಗುತ್ತಿವೆ. ಅನ್‌ಸ್ಟೇಬಲ್ ಡಿಫ್ಯೂಶನ್ ಹೆಸರಿನ ಸಮೂಹವೊಂದು ಎಐ ಸೃಷ್ಟಿತ ಪೋರ್ನ್‌ ಅನ್ನು ಅಧಿಕೃತಗೊಳಿಸಲು ಪಣ ತೊಟ್ಟು ನಿಂತಿದೆ. ಸಾಮೂಹಿಕ ನಿಧಿ ಸಂಗ್ರಹಣೆ ಪೋರ್ಟಲ್ ಒಂದರ ಮೂಲಕ ಈ ಸಮೂಹವು ತನ್ನ ಉದ್ದೇಶಕ್ಕಾಗಿ $60,000 ಗಳನ್ನು ಸಂಗ್ರಹಿಸಿದೆ.

ಛಾಯಾಗ್ರಾಹಕರು ಹಾಗೂ ಕಲಾವಿದರು ಎಐ ಸೃಷ್ಟಿತವಾದ ಈ ರೀತಿಯ ರಚನೆಗಳ ವಿರುದ್ಧ ದನಿಯೆತ್ತಿದ್ದು, ಆನ್ಲೈನ್ ಕಾನೂನು ಪಾಲನಾ ಸಂಸ್ಥೆಗಳಿಗೆ ಹೊಸ ತಲೆ ನೋವು ಸೃಷ್ಟಿಯಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read