ತಮ್ಮ ವೇಗದಿಂದಲೇ ಗಮನ ಸೆಳೆದ ಸಿಂಧಿ ತಳಿಯ ಕುದುರೆಗಳಿಗೆ ಭಾರೀ ಡಿಮ್ಯಾಂಡ್

ದನಗಳ ಮಾರಾಟಕ್ಕೆ ಜಾತ್ರೆ ನಡೆಸುವಂತೆ ಬಿಹಾರದ ಮುಜಾಫರ್‌ಪುರದಲ್ಲಿ ಪ್ರಾಣಿಗಳ ಜಾತ್ರೆ ಅಥವಾ ಮೇಳ ನಡೆಯುತ್ತೆ. ಈ ಮೇಳದಲ್ಲಿ ಕುದುರೆಗಳನ್ನು ಮಾರಾಟ ಮಾಡಲಾಗುತ್ತದೆ.

ಈ ಬಾರಿ ಕುದುರೆ ಮೇಳದಲ್ಲಿ ಆಕರ್ಷಣೆಯಾಗಿರೋದು ಸಿಂಧಿ ತಳಿಯ ಕುದುರೆಗಳಾದ ಜಯಮಂಗಲ ಮತ್ತು ವೀರಮಂಗಲ. ಇವುಗಳು ತಮ್ಮ ನೋಟಕ್ಕಾಗಿ ಮಾತ್ರವಲ್ಲದೆ ಕೌಶಲ್ಯಕ್ಕಾಗಿಯೂ ಸಾಕಷ್ಟು ಪ್ರಶಂಸೆಗೆ ಒಳಗಾಗಿವೆ.

ಗುಜರಾತ್‌ನಿಂದ ಬಂದ ಜಯಮಂಗಲ ಮತ್ತು ವೀರಮಂಗಲ ಇತರ ಪ್ರಾಣಿಗಳಿಗಿಂತ ತಮ್ಮ ವೇಗದಿಂದಾಗಿ ಎದ್ದು ಕಾಣುತ್ತವೆ.

ಗುಜರಾತ್‌ನ ಭುಜ್‌ನಿಂದ ಕುದುರೆಗಳನ್ನು ಜೋಡಿಯಾಗಿ ತರಲಾಗಿತ್ತು. ಈ ಕುದುರೆಗಳು ಗಂಟೆಗೆ 35-40 ಕಿಮೀ ವೇಗದಲ್ಲಿ ಚಲಿಸಬಲ್ಲವು ಎಂದು ಮಾಲೀಕರು ತಿಳಿಸಿದ್ದಾರೆ. ಈ ಕುದುರೆ ಜೋಡಿಯ ಮೌಲ್ಯ 5 ಲಕ್ಷ ರೂ.ಗಳಾಗಿದ್ದು, ಈ ಮೂಲಕ ಜಾತ್ರೆಗೆ ಬಂದಿದ್ದ ಕುದುರೆ ಪ್ರಿಯರು ಮತ್ತು ಖರೀದಿದಾರರ ಮೊದಲ ಆಯ್ಕೆಯಾಗಿವೆ.

ಸಿಂಧಿ ಕುದುರೆಗಳು ಸಿಂಧ್, ಕಚ್ ಮತ್ತು ಗುಜರಾತ್‌ ಭಾಗದಲ್ಲಿ ಕಂಡುಬರುತ್ತವೆ. ಇವು ಹೆಚ್ಚಿನ ವೇಗ ಮತ್ತು ದೂರವನ್ನು ಕ್ರಮಿಸಲು ಹೆಸರುವಾಸಿಯಾಗಿದೆ.

ಗುಜರಾತ್ ನಿಂದ ಹತ್ತಾರು ಸಿಂಧಿ ಕುದುರೆಗಳೊಂದಿಗೆ ಬಂದಿರುವ ಶೈಲೇಂದರ್ , ಸಿಂಧಿ ತಳಿಯ 12 ಕುದುರೆಗಳನ್ನು ತಂದಿರುವುದಾಗಿ ತಿಳಿಸಿದರು. ಅದರಲ್ಲಿ ನಾಲ್ಕು ಮಾರಾಟವಾದರೆ, ಜಯಮಂಗಲ ಮತ್ತು ವೀರಮಂಗಲಕ್ಕೆ ಬೇಡಿಕೆ ಇತ್ತು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read