ಈಕೆ ನಟಿಸಿದ್ದು ಎರಡು ಚಿತ್ರಗಳು ಗಳಿಸಿದ್ದು ಬರೋಬ್ಬರಿ 2500 ಕೋಟಿ ರೂಪಾಯಿ……!

ಬಾಲಿವುಡ್‌ ನಲ್ಲಿ ಕೆಲಸ ಮಾಡುವ ಸ್ಟಾರ್‌ ಮಾತ್ರವಲ್ಲ ದಕ್ಷಿಣ ಭಾರತದ ಅನೇಕ ನಟರು ಕೋಟಿ ಕೋಟಿ ಆಸ್ತಿ ಮಾಡಿದ್ದಾರೆ. ಅದ್ರಲ್ಲಿ ಬರೀ ನಟರು ಮಾತ್ರವಲ್ಲ ನಟಿಯರು ಸೇರಿದ್ದಾರೆ. ಕಳೆದ 11 ತಿಂಗಳಿಂದ ಯಾವುದೇ ಒಂದು ಚಿತ್ರದಲ್ಲಿ ನಟಿಸದೆ ಹೋದ್ರೂ ದಕ್ಷಿಣ ಭಾರತದ ನಟಿಯೊಬ್ಬಳು ನಟಿಸಿದ ಎರಡೇ ಎರಡು ಚಿತ್ರ 2500 ಕೋಟಿ ಗಳಿಸಿದೆ. ಈ ಚಿತ್ರದ ಮೂಲಕ ಮತ್ತಷ್ಟು ಪ್ರಸಿದ್ಧಿ ಪಡೆದ ನಟಿಯ ಆಸ್ತಿ ಕೋಟಿ ಲೆಕ್ಕದಲ್ಲಿದೆ. ನಾವು ಹೇಳ್ತಿರೋದು ದಕ್ಷಿಣ ಭಾರತದ ಪ್ರಸಿದ್ಧ ನಟಿ ಅನುಷ್ಕಾ ಶೆಟ್ಟಿ ಬಗ್ಗೆ.

ಅನುಷ್ಕಾ ಶೆಟ್ಟಿಯ ಬಾಲ್ಯದ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಇವರು ಯಾರು ಗೊತ್ತಾ ಅಂತಾ ಅಭಿಮಾನಿಗಳು ಪ್ರಶ್ನೆ ಕೇಳ್ತಿದ್ದಾರೆ. ಅನುಷ್ಕಾ ಶೆಟ್ಟಿ ಫೋಟೋ ವೈರಲ್‌ ಆದ್ಮೇಲೆ ಅವರ ಚಿತ್ರ ಹಾಗೂ ಆಸ್ತಿ ಬಗ್ಗೆಯೂ ಚರ್ಚೆಯಾಗಿದೆ. ಅನುಷ್ಕಾ ಶರ್ಮಾ 2005 ರಲ್ಲಿ ತೆರೆಕಂಡ ತೆಲುಗು ಚಿತ್ರ ಸೂಪರ್  ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ನಂತರ ಅವರು 2006 ರಲ್ಲಿ ರೆಂಡು ಚಿತ್ರದ ಮೂಲಕ ತಮಿಳು ಚಿತ್ರರಂಗಕ್ಕೆ ಪ್ರವೇಶಿಸಿದರು.

ಆದ್ರೆ 2015ರಲ್ಲಿ ತೆರೆಕಂಡ ಎಸ್.ಎಸ್.ರಾಜಮೌಳಿ ಅವರ ‘ಬಾಹುಬಲಿ: ದಿ ಬಿಗಿನಿಂಗ್’ ಹಾಗೂ 2017ರಲ್ಲಿ ತೆರೆಕಂಡ ‘ಬಾಹುಬಲಿ 2: ದಿ ಕನ್‌ಕ್ಲೂಷನ್’ ಸಿನಿಮಾದಲ್ಲಿ ನಟಿಸಿದ ಅನುಷ್ಕಾ ಶೆಟ್ಟಿಗೆ ವಿಶ್ವಾದ್ಯಂತ ಮನ್ನಣೆ ಸಿಕ್ಕಿದೆ. ಈ ಎರಡೂ ಸಿನಿಮಾಗಳಲ್ಲಿ ಯುವರಾಣಿ ದೇವಸೇನಾ ಪಾತ್ರದಲ್ಲಿ ಅನುಷ್ಕಾ ಶೆಟ್ಟಿ ನಟಿಸಿದ್ದರು. ಅನುಷ್ಕಾ ಶೆಟ್ಟಿ ಕೊನೆಯದಾಗಿ  ಮಿಸ್ ಶೆಟ್ಟಿ ಮಿಸ್ಟರ್ ಪೋಲಿಶೆಟ್ಟಿ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಅದಾದ್ಮೇಲೆ ಇನ್ನೂ ಅವರ ಚಿತ್ರ ತೆರೆಗೆ ಬಂದಿಲ್ಲ. ತೆಲುಗು ಚಿತ್ರ ‘ಘಾಟಿ’ ಮತ್ತು ಇನ್ನೊಂದು ಮಲಯಾಳಂ ಚಿತ್ರ ‘ಕಥನಾರ್ – ದಿ ವೈಲ್ಡ್ ಸೋರ್ಸೆರರ್’ ಚಿತ್ರೀಕರಣ ನಡೆಯುತ್ತಿದೆ.

ನಗುವಿನ ಖಾಯಿಲೆಯಿಂದ ಬಳಲುತ್ತಿರುವ ನಟಿ ಅನುಷ್ಕಾ ಶೆಟ್ಟಿ ನಿವ್ವಳ ಮೌಲ್ಯ 133 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read