ಈ ವರ್ಷದ ಅತೀ ಹೆಚ್ಚು ಗಳಿಕೆಯ 3 ಸಿನಿಮಾಗಳಲ್ಲೂ ನಟಿಸಿದ್ದಾರೆ ಈ ನಟ !

ಬಾಲಿವುಡ್​ ಕಿಂಗ್​​ಖಾನ್​ ಶಾರೂಕ್​ ಖಾನ್​ ʼಜವಾನ್ʼ​ ಸಿನಿಮಾ ಬಾಕ್ಸಾಫೀಸಿನಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡ್ತಿದೆ. ಶಾರೂಕ್​ ಖಾನ್​ ಪಾಲಿಗೆ 2023 ಸುವರ್ಣ ವರ್ಷವಾಗಿದೆ. ಏಕೆಂದರೆ ಈ ವರ್ಷ ಅವರ ಎರಡೆರಡು ಸಿನಿಮಾಗಳಲು ಬಾಕ್ಸಾಫೀಸಿನಲ್ಲಿ 1000 ಕೋಟಿ ಕ್ಲಬ್​ ಸೇರಿವೆ.

ಶಾರೂಕ್​ಖಾನ್​ರ ಎರಡೆರಡು ಸಿನಿಮಾಗಳು ಹಿಟ್​ ಆದರೂ ಸಹ ಕಳೆದ ಮೂರು ವರ್ಷಗಳಲ್ಲಿ ಅತೀ ಹೆಚ್ಚು ಗಳಿಕ ಮಾಡಿದ ಭಾರತೀಯ ನಟನ ಸಾಲಿನಲ್ಲಿ ಶಾರೂಕ್​ ಖಾನ್​​ ಸ್ಥಾನ ಪಡೆದಿಲ್ಲ ಎಂದರೆ ನೀವು ನಂಬಲೇಬೇಕು.

ಕಳೆದ ಮೂರು ವರ್ಷಗಳಲ್ಲಿ ಬ್ಲಾಕ್​ಬಸ್ಟರ್​ ಸಿನಿಮಾಗಳನ್ನು ನೀಡಿರುವ 27 ವರ್ಷದ ನಟ ಈ ಬಾರಿ ಅತೀ ಹೆಚ್ಚು ಗಳಿಕೆ ಮಾಡಿದ ಸಿನಿಮಾಗಳಲ್ಲಿ ನಟಿಸಿರುವ ನಟ ಎಂಬ ಸಾಧನೆ ಮಾಡಿದ್ದಾರೆ.

ತಮಿಳುನಾಡು ಮೂಲದ ಜಾಫರ್​​ ಸಾದಿಕ್​ ಕೋವಿಡ್​​ ಸಾಂಕ್ರಾಮಿಕದ ಬಳಿಕ ಕೆಲವು ದೊಡ್ಡ ದೊಡ್ಡ ಸಿನಿಮಾಗಳಲ್ಲಿ ನಟಿಸೋ ಅವಕಾಶವನ್ನು ಪಡೆದುಕೊಂಡಿದ್ದರು. ವಿಕ್ರಂ, ಜೈಲರ್​ ಹಾಗೂ ಜವಾನ್​ ಸಿನಿಮಾಗಳಲ್ಲಿ ಜಾಫರ್​ ಸಾದಿಕ್​ ನಟಿಸಿದ್ದು ಈ ಸಿನಿಮಾಗಳು ಬ್ಲಾಕ್​ಬಸ್ಟರ್ ಹಿಟ್​ ಎನಿಸಿವೆ. ಜಾಫರ್​ ಸಾಧಿಕ್​ರ ಮೂರು ಸಿನಿಮಾಗಳು 1900 ಕೋಟಿ ರೂಪಾಯಿ ಕ್ಲಬ್​ ಸೇರಿದೆ.

1995ರಲ್ಲಿ ಜನಿಸಿದ ಜಾಫರ್​ ಸಾದಿಕ್​ ನಟನಾಗುವ ಮುನ್ನ ನೃತ್ಯ ಸಂಯೋಜಕನ ಕೆಲಸ ಮಾಡುತ್ತಿದ್ದರು. ವಿಲನ್​ ಪಾತ್ರಗಳ ಮೂಲಕವೇ ಸಾಧಿಕ್​ ಹೆಚ್ಚು ಸದ್ದು ಮಾಡಿದ್ದಾರೆ. ಪಾವಕಡೈಗಲ್​ ಎಂಬ ತಮಿಳು ವೆಬ್​ಸೀರಿಸ್​ನ ಮೂಲಕ ಸಾದಿಕ್​ ಹೆಸರುವಾಸಿಯಾದ್ರು. ಇದಾದ ಬಳಿಕ 2022ರ ವಿಕ್ರಂ ಸಿನಿಮಾದಿಂದ ಇವರ ಸಿನಿಮಾ ವೃತ್ತಿ ಜೀವನ ಆರಂಭಗೊಂಡಿದೆ. ಜೈಲರ್​ ಹಾಗೂ ಜವಾನ್​ ಸಿನಿಮಾಗಳಲ್ಲಿಯೂ ಸಾದಿಕ್​ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read