BREAKING NEWS: ಉಕ್ರೇನ್ ಯುದ್ಧದಲ್ಲಿ ರಷ್ಯಾ ಸೇನೆ ಪರ ಹೋರಾಡುತ್ತಿದ್ದ 12 ಭಾರತೀಯರು ಸಾವು, 16 ಮಂದಿ ನಾಪತ್ತೆ

ನವದೆಹಲಿ: ಉಕ್ರೇನ್ ಜೊತೆಗಿನ ಸಂಘರ್ಷದಲ್ಲಿ ರಷ್ಯಾದ ಸೇನೆಯಲ್ಲಿದ್ದು ಹೋರಾಡುತ್ತಿದ್ದ 12 ಭಾರತೀಯರು ಸಾವನ್ನಪ್ಪಿದ್ದಾರೆ, 16 ಮಂದಿ ಕಾಣೆಯಾಗಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.

ವಿದೇಶಾಂಗ ವ್ಯವಹಾರಗಳ ವಕ್ತಾರ ರಣಧೀರ್ ಜೈಸ್ವಾಲ್, ರಷ್ಯಾ-ಉಕ್ರೇನ್ ಸಂಘರ್ಷದಲ್ಲಿ ರಷ್ಯಾ ಪರವಾಗಿ ಹೋರಾಡುತ್ತಿರುವ ಒಟ್ಟು 126 ಭಾರತೀಯರಲ್ಲಿ 12 ಮಂದಿ ಸಾವನ್ನಪ್ಪಿದ್ದಾರೆ ಮತ್ತು 16 ಭಾರತೀಯರು ಕಾಣೆಯಾಗಿದ್ದಾರೆ. 96 ಮಂದಿ ಹಿಂತಿರುಗಿದ್ದಾರೆ ಮತ್ತು 18 ಮಂದಿ ಇನ್ನೂ ಭಾರತಕ್ಕೆ ಹಿಂತಿರುಗಿಲ್ಲ ಎಂದು ಅವರು ಹೇಳಿದ್ದಾರೆ.

ರಷ್ಯಾದ ಸೇನೆಯಲ್ಲಿ ಮುಂಚೂಣಿಯಲ್ಲಿ ಹೋರಾಡುತ್ತಿದ್ದಾಗ ಕೇರಳದ ವ್ಯಕ್ತಿ ಬಿನಿಲ್ ಬಾಬು(32) ಸಾವನ್ನಪ್ಪಿದ ಬಗ್ಗೆ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಈ ಘಟನೆಯನ್ನು ‘ದುರದೃಷ್ಟಕರ’ ಎಂದು ಕರೆದಿದೆ,

ನಮ್ಮ ರಾಯಭಾರ ಕಚೇರಿಯು ರಷ್ಯಾದ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದೆ. ಅವರ ಮೃತದೇಹವನ್ನು ಆದಷ್ಟು ಬೇಗ ಭಾರತಕ್ಕೆ ತರಲು ಪ್ರಯತ್ನಿಸಿದೆ. ರಷ್ಯಾದಲ್ಲಿ ಉಳಿದಿರುವವರನ್ನು ಬಿಡುಗಡೆ ಮಾಡಲು ಮತ್ತು ಸ್ವದೇಶಕ್ಕೆ ಕಳುಹಿಸಲು ಭಾರತ ಪ್ರಯತ್ನಿಸುತ್ತಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರರು ಹೇಳಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read