ನನ್ನ ಆರ್ಥಿಕ ನೀತಿಗೆ ನಂಜುಂಡಸ್ವಾಮಿಯವರೇ ಪ್ರೇರಣೆ: ಸಿಎಂ ಸಿದ್ಧರಾಮಯ್ಯ

ನನ್ನ ಆರ್ಥಿಕ ನೀತಿಗೆ ರೈತ ನಾಯಕ ಪ್ರೊ.ಎಂ.ಡಿ. ನಂಜುಂಡಸ್ವಾಮಿಯವರೇ ಪ್ರೇರಣೆ ಎಂದು ಸಿಎಂ ಸಿದ್ಧರಾಮಯ್ಯ ತಿಳಿಸಿದ್ದಾರೆ.

ಜನ್ಮದಿನದಂದು ಪ್ರೊ.ಎಂ.ಡಿ.ಎನ್. ಅವರನ್ನು ಸ್ಮರಿಸಿರುವ ಸಿಎಂ, ನಾಡಿನ ರೈತರ ಒಡಲಾಳದ ಕೂಗಿಗೆ ರೈತರ ಸಂಘವೆಂಬ ಒಂದು ಸಂಘಟಿತ ರೂಪಕೊಟ್ಟು, ಆಳುವ ಸರ್ಕಾರಗಳನ್ನು ರೈತರ ಬದುಕು – ಬವಣೆಗಳಿಗೆ ಕಿವಿಯಾಗಿಸಿದ ಜನಪರ ಕಾಳಜಿಯ ನಿಸ್ವಾರ್ಥ ಹೋರಾಟಗಾರ ಪ್ರೊ.ಎಂ.ಡಿ. ನಂಜುಂಡಸ್ವಾಮಿಯವರು ನನ್ನೂರಿನವರು ಎಂಬುದು ನನಗೆ ಹೆಮ್ಮೆ ಎಂದು ತಿಳಿಸಿದ್ದಾರೆ.

ಕರ್ನಾಟಕ ರಾಜ್ಯ ರೈತ ಸಂಘದ ಸಂಸ್ಥಾಪಕರು ಮತ್ತು ನನ್ನ ಮಾರ್ಗದರ್ಶಕರಾಗಿದ್ದ ಪ್ರೊ.ಎಂ.ಡಿ.ನಂಜುಂಡಸ್ವಾಮಿಯವರನ್ನು ಅವರ ಹುಟ್ಟುಹಬ್ಬದ ದಿನ ಗೌರವ ಮತ್ತು ಕೃತಜ್ಞತಾ ಭಾವದೊಂದಿಗೆ ನೆನೆಯುತ್ತೇನೆ ಎಂದಿದ್ದಾರೆ.

ಪ್ರೊ.ಎಂಡಿಎನ್ ಅವರ ಜನಪರ ಕಾಳಜಿ, ಹೋರಾಟದ ಛಲ ಮತ್ತು ನೇರ-ನಿಷ್ಠುರ ನಡವಳಿಕೆಯಿಂದ ನಾನು ಪ್ರಭಾವಿತನಾದವನು. ನನ್ನ ರಾಜಕೀಯ ಜೀವನದ ಪ್ರಾರಂಭದ ದಿನಗಳಲ್ಲಿ ಪ್ರೊ.ಎಂಡಿಎನ್ ಅವರು ನನ್ನ ಬಗ್ಗೆ ತೋರಿಸಿದ್ದ ಕಾಳಜಿ ಮತ್ತು ನೀಡಿದ್ದ ಮಾರ್ಗದರ್ಶನಕ್ಕೆ ನಾನು ಸದಾ ಋಣಿ ಎಂದು ತಿಳಿಸಿದ್ದಾರೆ.

ರೈತ ಪಕ್ಷಪಾತಿಯಾಗಿರುವ ನನ್ನ ಆರ್ಥಿಕ ನೀತಿಗೆ ಅವರೇ ಪ್ರೇರಣೆ. ಪ್ರೊ.ಎಂಡಿಎನ್ ಅವರು ದೈಹಿಕವಾಗಿ ನಮ್ಮ ನಡುವೆ ಇಲ್ಲದೆ ಇದ್ದರೂ ಅವರ ಚಿಂತನೆಗಳು ನಮ್ಮನ್ನು ಸದಾ ಪ್ರೇರೇಪಿಸುತ್ತಿರುತ್ತದೆ ಎಂದು ಸಿಎಂ ತಿಳಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read