ಇಸ್ರೇಲಿ ಸೈನಿಕರಿಗೆ ಉಚಿತ ಊಟ ನೀಡಿದ್ದಕ್ಕಾಗಿ ಮೆಕ್ ಡೊನಾಲ್ಡ್ಸ್ ವಿರುದ್ಧ ಆಕ್ರೋಶ

ಹಮಾಸ್ ವಿರುದ್ಧ ನಡೆಯುತ್ತಿರುವ ಯುದ್ಧದ ನಂತರ ಇಸ್ರೇಲಿ ಸೈನಿಕರಿಗೆ ಉಚಿತ ಊಟವನ್ನು ನೀಡುವುದಾಗಿ ಘೋಷಿಸಿದ ನಂತರ ಮೆಕ್‌ಡೊನಾಲ್ಡ್ಸ್ ಬಿಸಿ ಎದುರಿಸುತ್ತಿದೆ. ಮೆಕ್‌ಡೊನಾಲ್ಡ್ಸ್ ಇಸ್ರೇಲ್ ಇನ್‌ಸ್ಟಾಗ್ರಾಮ್‌ನಲ್ಲಿ ಆಸ್ಪತ್ರೆಗಳು ಮತ್ತು ಇಸ್ರೇಲ್ ರಕ್ಷಣಾ ಪಡೆಗಳಲ್ಲಿನ ಪಡೆಗಳಿಗೆ ಸಾವಿರಾರು ಉಚಿತ ಊಟವನ್ನು ನೀಡುತ್ತಿದೆ ಎಂದು ಘೋಷಿಸಿತು.

ನಿನ್ನೆ ನಾವು ಆಸ್ಪತ್ರೆಗಳು ಮತ್ತು ಮಿಲಿಟರಿ ಘಟಕಗಳಿಗೆ 4000 ಊಟಗಳನ್ನು ದಾನ ಮಾಡಿದ್ದೇವೆ ಎಂದು ಮೆಕ್‌ ಡೊನಾಲ್ಡ್ಸ್ ಇಸ್ರೇಲ್ ತಿಳಿಸಿದೆ. ಸೈನಿಕರಿಗೆ ಪ್ರತಿದಿನ ಸಾವಿರಾರು ಊಟಗಳನ್ನು ದಾನ ಮಾಡಲು ನಾವು ಉದ್ದೇಶಿಸಿದ್ದೇವೆ. ರೆಸ್ಟೋರೆಂಟ್‌ಗಳಿಗೆ ಬರುವ ಸೈನಿಕರಿಗೆ ರಿಯಾಯಿತಿ ಇದೆ. ನಾವು ಈ ಉದ್ದೇಶಕ್ಕಾಗಿ 5 ರೆಸ್ಟೋರೆಂಟ್‌ಗಳನ್ನು ತೆರೆದಿದ್ದೇವೆ ಎಂದು ಹೇಳಿದೆ.

ರೆಸ್ಟೋರೆಂಟ್‌ನ ಈ ಕ್ರಮವನ್ನು ಅನೇಕ ಬಳಕೆದಾರರು ಟೀಕಿಸಿದ್ದಾರೆ. ಮೆಕ್‌ಡೊನಾಲ್ಡ್ಸ್ IDF ಗೆ(ಇಸ್ರೇಲ್‌ನ ಮಿಲಿಟರಿ ಪಡೆಗಳಿಗೆ) ಉಚಿತ ಊಟ ಒದಗಿಸುತ್ತಿದೆ. ನಾವು ನಮ್ಮ ತತ್ವಗಳ ಮೇಲೆ ನಿಲ್ಲಬೇಕು ಮತ್ತು ನಮ್ಮ ನಂಬಿಕೆಗಳಿಗೆ ಹೊಂದಿಕೆಯಾಗುವ ಕ್ರಮಗಳನ್ನು ತೆಗೆದುಕೊಳ್ಳಬೇಕು. ಘರ್ಷಣೆಯಲ್ಲಿ ತೊಡಗಿರುವವರ ಬೆಂಬಲಿಸುವ McDonalds ನಂತಹ ಕಂಪನಿಗಳನ್ನು ಬಹಿಷ್ಕರಿಸೋಣ ಎಂದು ಒಬ್ಬ ಬಳಕೆದಾರರೊಬ್ಬರು ಹೇಳಿದ್ದಾರೆ.

ಮುಗ್ಧ ಜೀವಗಳ ಹಾನಿ ಮಾಡಿದ ಇಸ್ರೇಲ್ ಡಿಫೆನ್ಸ್ ಫೋರ್ಸ್‌ಗೆ ಉಚಿತ ಊಟ ನೀಡಿ ಗಾಜಾದಲ್ಲಿ ಇರುವವರಿಗೆ ನೀಡದಿದ್ದರೆ ಪ್ರಪಂಚದಾದ್ಯಂತದ ಎಲ್ಲಾ ಮುಸ್ಲಿಮರು ಮೆಕ್‌ಡೊನಾಲ್ಡ್ಸ್ ಅನ್ನು ಬಹಿಷ್ಕರಿಸಬೇಕು ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ.

ಕೆಲವು ಬಳಕೆದಾರರು ಇಸ್ರೇಲ್‌ನ ಬೆಂಬಲಕ್ಕಾಗಿ ಫಾಸ್ಟ್-ಫುಡ್ ಸರಪಳಿಯನ್ನು ಶ್ಲಾಘಿಸಿದ್ದಾರೆ. ಒಳ್ಳೆಯದು ಮೆಕ್ಡೊನಾಲ್ಡ್ಸ್ ಇಸ್ರೇಲ್ ಎಂದು ಹೇಳಿದ್ದಾರೆ.

ಇಸ್ರೇಲಿ ಪಡೆಗಳಿಗೆ ಉಚಿತ ಆಹಾರವನ್ನು ಒದಗಿಸುವ ಮೆಕ್ ಡೊನಾಲ್ಡ್ಸ್ ಕ್ರಮದ ನಂತರ ಅಕ್ಟೋಬರ್ 13 ರಂದು ಲೆಬನಾನ್‌ನಲ್ಲಿ ಪ್ರತಿಭಟನೆಗಳು ಭುಗಿಲೆದ್ದವು. ಸ್ಪಿನ್ನೀಸ್‌ ನಲ್ಲಿರುವ ಮೆಕ್‌ಡೊನಾಲ್ಡ್ ಮೇಲೆ ಪ್ಯಾಲೇಸ್ಟಿನಿಯನ್ ಗುಂಪುಗಳು ದಾಳಿ ಮಾಡಿವೆ.

ಏತನ್ಮಧ್ಯೆ, McDonald’s Oman ಗಾಜಾಗೆ ತಮ್ಮ ಬೆಂಬಲವನ್ನು ವ್ಯಕ್ತಪಡಿಸಿತು. ಒಮಾನ್ ಗಾಜಾದೊಂದಿಗೆ ನಿಂತಿದೆ. ಗಾಜಾದಲ್ಲಿನ ಜನರ ಪರಿಹಾರ ಪ್ರಯತ್ನಗಳಿಗಾಗಿ ಕಂಪನಿಯು $ 100,000 ದೇಣಿಗೆ ನೀಡಿದೆ ಎಂದು ಹೇಳಿದೆ.

https://twitter.com/McDonaldsKuwait/status/1713133953274507496

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read