ಸಾಹಸ ಪ್ರದರ್ಶನ ವೇಳೆ ನಿಯಂತ್ರಣ ಕಳೆದುಕೊಂಡ ಸ್ಟಂಟ್ ಮ್ಯಾನ್: ಪ್ರೇಕ್ಷಕರ ಗ್ಯಾಲರಿಗೆ ಬೈಕ್ ನುಗ್ಗಿ 9 ಮಂದಿಗೆ ಗಾಯ

ಪಶ್ಚಿಮ ಬಂಗಾಳದ ಅಸನ್ಸೋಲ್‌ನಲ್ಲಿ ‘ಮೌತ್ ಕಾ ಕುವಾನ್’ ಕಾರ್ಯಕ್ರಮದ ವೇಳೆ ಬೈಕ್ ಚಲಾಯಿಸುತ್ತಿದ್ದ ಸ್ಟಂಟ್‌ ಮ್ಯಾನ್ ನಿಯಂತ್ರಣ ಕಳೆದುಕೊಂಡು ಪ್ರೇಕ್ಷಕರ ಗ್ಯಾಲರಿಗೆ ನುಗ್ಗಿದ ಪರಿಣಾಮ ಒಂಬತ್ತು ಜನರು ಗಾಯಗೊಂಡಿದ್ದಾರೆ.

ಪಶ್ಚಿಮ ಬರ್ಧಮಾನ್ ಜಿಲ್ಲೆಯ ಸಲಾನ್‌ ಪುರ ಬ್ಲಾಕ್‌ ನಲ್ಲಿ ಆಯೋಜಿಸಲಾಗಿದ್ದ ಮುಕ್ತೈ ಚಂಡಿ ಮೇಳದಲ್ಲಿ ಈ ಅವಘಡ ಸಂಭವಿಸಿದೆ.

ಭಾನುವಾರ ನಡೆದ ಜಾತ್ರೆಗೆ ಅಪಾರ ಜನಸ್ತೋಮ ನೆರೆದಿತ್ತು. ‘ಮೌತ್ ಕಾ ಕುವಾನ್’ ಕಾರ್ಯಕ್ರಮದ ವೇಳೆ, ಬೈಕ್‌ ನಲ್ಲಿ ಸ್ಟಂಟ್‌ ಮ್ಯಾನ್ ಲೈವ್ ಪ್ರದರ್ಶನ ನೀಡುತ್ತಿದ್ದರು. ಬಾವಿಯೊಳಗೆ ಅತಿವೇಗದಲ್ಲಿ ಸವಾರಿ ಮಾಡುತ್ತಿದ್ದ ಅವರು ಇದ್ದಕ್ಕಿದ್ದಂತೆ ನಿಯಂತ್ರಣ ಕಳೆದುಕೊಂಡು ಬಾವಿಗೆ ಬಿದ್ದು, ಅವರ ಬೈಕ್ ಪ್ರೇಕ್ಷಕರಿಗೆ ಡಿಕ್ಕಿ ಹೊಡೆದಿದೆ. ಪೊಲೀಸರು ಮತ್ತು ಮೇಳದ ಆಯೋಜಕರು ಪರಿಸ್ಥಿತಿಯನ್ನು ಹತೋಟಿಗೆ ತಂದರು.

ಅಪಘಾತದಲ್ಲಿ ಮಹಿಳೆ ಮತ್ತು ಇಬ್ಬರು ಮಕ್ಕಳು ಸೇರಿದಂತೆ ಒಂಬತ್ತು ಜನರು ಗಾಯಗೊಂಡಿದ್ದು, ಅವರನ್ನು ಚಿಕಿತ್ಸೆಗಾಗಿ ಅಸನ್ಸೋಲ್ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ. ಒಂಬತ್ತು ಗಾಯಾಳುಗಳ ಪೈಕಿ ಆರು ಮಂದಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಾಥಮಿಕ ಚಿಕಿತ್ಸೆ ಬಳಿಕ ಡಿಸ್ಚಾರ್ಜ್ ಆಗಿದ್ದು, ಗಂಭೀರವಾಗಿ ಗಾಯಗೊಂಡಿದ್ದ ಮೂವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read