BIG NEWS: ಮಠಕ್ಕೆ ಸಾವಿರಾರು ಕೋಟಿ ರೂ. ಮೌಲ್ಯದ ಆಸ್ತಿ ದಾನ ಮಾಡಿದ ಉದ್ಯಮಿ ಸನ್ಯಾಸ ದೀಕ್ಷೆ

ರಾಮನಗರ: ರಾಮನಗರ ಜಿಲ್ಲೆ ಮಾಗಡಿಯ ಪಾಲನಹಳ್ಳಿ ಮಠಕ್ಕೆ ರಾಜಸ್ಥಾನದ ಗಣಿ ಉದ್ಯಮಿ ಪಿ.ಬಿ. ಓಸ್ವಾಲ್ ಅವರು ತಾವು ಗಳಿಸಿದ ಸಾವಿರಾರು ಕೋಟಿ ರೂಪಾಯಿ ಬೆಲೆಬಾಳುವ ಸಮಸ್ತ ಆಸ್ತಿಯನ್ನು ದಾನ ಮಾಡಿ ಜೈನ ಸನ್ಯಾಸ ದೀಕ್ಷೆ ತೆಗೆದುಕೊಳ್ಳಲು ಮುಂದಾಗಿದ್ದಾರೆ.

ಪಾಲನಹಳ್ಳಿ ಮಠಕ್ಕೆ ಮೂರು ಸಾವಿರ ಎಕರೆ ಆಸ್ತಿಯ ಒಡೆತನ ಸಿಕ್ಕಿದ್ದು, ರಾಜ್ಯದ ಹೆಚ್ಚಿನ ಸಂಪತ್ತು ಹೊಂದಿದ ಮಠಗಳಲ್ಲಿ ಅಗ್ರಸ್ಥಾನಕ್ಕೆ ನಿಲ್ಲುವಂತೆ ಮಾಡಿದೆ.

ಪಿ.ಬಿ. ಓಸ್ವಾಲ್ ಜೈನ್ ಅವರು ತಾವು ಸಂಪಾದಿಸಿರುವ ರಾಜಸ್ಥಾನ, ಮುಂಬೈ, ಗುಜರಾತ್, ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ ರಾಜ್ಯಗಳಲ್ಲಿರುವ ಮೂರು ಸಾವಿರ ಎಕರೆ ಕಲ್ಲಿದ್ದಲು, ಚಿನ್ನ ಅದಿರಿನ ಗಣಿಗಳೊಂದಿಗೆ ಆಸ್ಟ್ರೇಲಿಯಾ, ಜಪಾನ್, ಜರ್ಮನಿ ದೇಶಗಳೊಂದಿಗೆ ನಡೆಸುತ್ತಿದ್ದ ವಿದೇಶಿ ವಹಿವಾಟುಗಳನ್ನು ಕಾನೂನಾತ್ಮಕವಾಗಿ ಉಯಿಲು ಬರೆದು ಮಠಕ್ಕೆ ದಾನವಾಗಿ ನೀಡಿದ್ದಾರೆ.

ಓಸ್ವಾಲ್ ಜೈನ್ ಅವರಿಗೆ ಇಬ್ಬರು ಮಕ್ಕಳಿದ್ದು, ಒಬ್ಬ ವಿದೇಶದಲ್ಲಿದ್ದಾರೆ. ಅವರ ಪುತ್ರಿ ರಾಜಸ್ಥಾನದಲ್ಲಿ ಸಿಎ ವೃತ್ತಿಯಲ್ಲಿದ್ದಾರೆ. ಅವರಿಗೆ ಪಿತ್ರಾರ್ಜಿತ ಆಸ್ತಿಯನ್ನು ನೀಡಿರುವ ಓಸ್ವಾಲ್ ಜೈನ್ ತಾವು ಸ್ವಯಾರ್ಜಿತವಾಗಿ ಗಳಿಸಿದ 3000 ಎಕರೆ ಆಸ್ತಿಯನ್ನು ದಾನ ಮಾಡಿದ್ದಾರೆ.

ಓಸ್ವಾಲ್ ಕಂಪನಿ ಆರಂಭವಾದಾಗಿನಿಂದ 27 ವರ್ಷ ಪಾಲನಹಳ್ಳಿ ಮಠದ ಶ್ರೀಗಳ ಮಾರ್ಗದರ್ಶನ ಮತ್ತು ಒಡನಾಟ ಇದ್ದ ಕಾರಣ ಅವರಿಗೆ ಆಸ್ತಿ ಬರೆದು ಕೊಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಆಸ್ತಿ ವ್ಯವಹಾರಿಕ ಮತ್ತು ಉಯಿಲು ಪತ್ರಗಳನ್ನು ಹಸ್ತಾಂತರ ಮಾಡಿದ ಬಳಿಕ ಮಾತನಾಡಿದ ಪಾಲನಹಳ್ಳಿ ಮಠದ ಡಾ. ಸಿದ್ಧರಾಮ ಸ್ವಾಮೀಜಿ, ಆಸ್ತಿ ಕಾನೂನಾತ್ಮಕವಾಗಿ ಮಠಕ್ಕೆ ವರ್ಗಾವಣೆಯಾದ ನಂತರ ಆಡಳಿತ ಮಂಡಳಿ ತೆರಿಗೆ ಆಯುಕ್ತರೊಂದಿಗೆ ಚರ್ಚಿಸಿ ಗಣಿ ವಹಿವಾಟು ಆರಂಭಿಸಿ ಬಂದ ಆದಾಯದಿಂದ ಮಠದ ನಿರ್ವಹಣೆ, ಶಾಲೆ, ಕಾಲೇಜು, ಆಸ್ಪತ್ರೆ. ಗೋಶಾಲೆ. ದೇವಾಲಯ ನಿರ್ಮಾಣ. ಬಡವರ ಸೇವೆ ಮಾಡಲಾಗುವುದು ಎಂದು ಹೇಳಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read