ನಟ, ನಿರೂಪಕ ಮಾಸ್ಟರ್ ಆನಂದ್ ಗೆ ವಂಚನೆ: ದೂರು

ಬೆಂಗಳೂರು: ನಿವೇಶನ ನೀಡುವುದಾಗಿ ನಟ, ನಿರೂಪಕ ಮಾಸ್ಟರ್ ಆನಂದ್ ಅವರಿಗೆ 18.5 ಲಕ್ಷ ರೂಪಾಯಿ ವಂಚನೆ ಮಾಡಲಾಗಿದೆ.

2020 ರ ಸೆಪ್ಟೆಂಬರ್ ನಿಂದ 2021ರ ಅಕ್ಟೋಬರ್ ಅವಧಿಯಲ್ಲಿ ವಂಚನೆ ಮಾಡಲಾಗಿದ್ದು, ಮಲ್ಟಿ ಲೀಪ್ ವೆಂಚರ್ಸ್ ಕಂಪನಿ ವಿರುದ್ಧ ಮಾಸ್ಟರ್ ಆನಂದ್ ಬೆಂಗಳೂರಿನ ಚಂದ್ರ ಲೇಔಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಕೊಮ್ಮಘಟ್ಟದ ರಾಮಸಂದ್ರ ಗ್ರಾಮದಲ್ಲಿ ಆನಂದ್ ನಿವೇಶನ ನೋಡಿದ್ದರು. ಶೂಟಿಂಗ್ ಗೆ ತೆರಳಿದ್ದ ವೇಳೆ ಮಾಸ್ಟರ್ ಆನಂದ್ ನಿವೇಶನ ವೀಕ್ಷಿಸಿದ್ದರು. ನಿವೇಶನ ಖರೀದಿಗೆ ಸಾಲ ಸೌಲಭ್ಯದ ವ್ಯವಸ್ಥೆ ಇರುವುದಾಗಿ ಕಂಪನಿಯವರು ತಿಳಿಸಿದ್ದರು. 2000 ಅಡಿ ವಿಸ್ತೀರ್ಣದ ನಿವೇಶನವನ್ನು ಮಲ್ಟಿ ಲೀಪ್ವೆಂಚರ್ ತೋರಿಸಿದ್ದು, 70 ಲಕ್ಷ ರೂಪಾಯಿಗೆ ಖರೀದಿ ಒಪ್ಪಂದವಾಗಿ ಮಾಸ್ಟರ್ ಆನಂದ್ ಮುಂಗಡ ಹಣ ನೀಡಿದ್ದರು. ಹಂತ ಹಂತವಾಗಿ 18.5 ಲಕ್ಷ ರೂಪಾಯಿ ಹಣ ನೀಡಿದ್ದರು.

ಮಾಸ್ಟರ್ ಆನಂದ್ ಮತ್ತು ಅವರ ಪತ್ನಿ ಯಶಸ್ವಿನಿ ಹೆಸರಲ್ಲಿ ಕಂಪನಿ ನಿವೇಶನ ಖರೀದಿ ಕರಾರು ಪತ್ರ ಮಾಡಿಕೊಟ್ಟಿತ್ತು. ಈ ನಡುವೆ ನಿವೇಶನವನ್ನು ಬೇರೆಯವರಿಗೆ ಕಂಪನಿ ಮಾರಾಟ ಮಾಡಿದೆ. ಈ ಬಗ್ಗೆ ವಿಚಾರಿಸಿದಾಗ ಯಾವುದೇ ಸ್ಪಂದನೆ ನೀಡಿಲ್ಲ. ಹಣ ಕೂಡ ವಾಪಸ್ ಕೊಟ್ಟಿಲ್ಲ. ಆರೋಪಿಗಳ ವಿರುದ್ಧ BUDS ಕಾಯ್ದೆ 2019 ರ ಅಡಿ ಎಫ್ಐಆರ್ ದಾಖಲಿಸಲಾಗಿದ್ದು, ಪೊಲೀಸರು ಮುಂದಿನ ಕ್ರಮಕೈಗೊಂಡಿದ್ದಾರೆ ಎನ್ನಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read