ಗುಜರಾತ್ : ಗುಜರಾತ್ ನಲ್ಲಿ ‘ಎಟಿಎಸ್’ ಭರ್ಜರಿ ಕಾರ್ಯಾಚರಣೆ ನಡೆಸಿ ನಾಲ್ವರು ಶಂಕಿತ ಉಗ್ರರನ್ನು ಬಂಧಿಸಿದೆ. ಗುಜರಾತ್ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಭಾರತೀಯ ಉಪಖಂಡದಲ್ಲಿ (ಎಕ್ಯೂಐಎಸ್) ಅಲ್ ಖೈದಾ ಜೊತೆ ಸಂಪರ್ಕ ಹೊಂದಿರುವ ನಾಲ್ವರು ಭಯೋತ್ಪಾದಕರನ್ನು ಬಂಧಿಸಿದೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.
ಬಂಧಿತ ಆರೋಪಿಗಳನ್ನು ದೆಹಲಿಯ ಮೊಹಮ್ಮದ್ ಫೈಕ್, ಅಹಮದಾಬಾದ್ನ ಮೊಹಮ್ಮದ್ ಫರ್ದೀನ್, ಅರವಳ್ಳಿಯ ಮೊದಸಾದ ಸೆಫುಲ್ಲಾ ಕುರೇಶಿ ಮತ್ತು ಉತ್ತರ ಪ್ರದೇಶದ ನೋಯ್ಡಾದ ಜೀಶನ್ ಅಲಿ ಎಂದು ಗುರುತಿಸಲಾಗಿದೆ.
ಈ ಬಗ್ಗೆ ದೃಢಪಡಿಸಿದ ಗುಜರಾತ್ ಎಟಿಎಸ್ ಡಿಐಜಿ ಸುನಿಲ್ ಜೋಶಿ, ನಾಲ್ವರು ಶಂಕಿತರು ಅಲ್ ಖೈದಾ ಜೊತೆ ಸಂಯೋಜಿತವಾಗಿರುವ ನಿಷೇಧಿತ ಭಯೋತ್ಪಾದಕ ಸಂಘಟನೆಯಾದ ಎಕ್ಯೂಐಎಸ್ಗೆ ಸಂಪರ್ಕ ಹೊಂದಿದ್ದಾರೆಂದು ಶಂಕಿಸಲಾಗಿದ್ದು, ಕಣ್ಗಾವಲಿನಲ್ಲಿದ್ದಾರೆ ಎಂದು ಹೇಳಿದರು.
#WATCH | Gujarat ATS arrested four terrorists with links to AQIS (Al-Qaeda in the Indian subcontinent). The four have been identified as Mohd Faiq r/o Delhi, Mohd Fardeen r/o Ahmedabad (Gujarat), Sefullah Kureshi r/o Modasa (Gujarat) and Zeeshan Ali r/o Noida (UP). pic.twitter.com/IyFutWglUi
— ANI (@ANI) July 23, 2025