87,000 ಎಸ್-ಪ್ರೆಸ್ಸೊ, ಇಕೊ ವಾಹನ ಹಿಂಪಡೆದ ಮಾರುತಿ ಸುಜುಕಿ

ಮಾರುತಿ ಸುಜುಕಿ ಎಸ್-ಪ್ರೆಸ್ಸೊ ಮತ್ತು ಇಕೊ ವ್ಯಾನ್‌ನ 87,000 ಕ್ಕೂ ಹೆಚ್ಚು ಯುನಿಟ್‌ಗಳನ್ನು ಹಿಂಪಡೆದಿದೆ. ಮಾರುತಿ ಸುಜುಕಿ ಸ್ಟೀರಿಂಗ್ ವೀಲ್ ಸೆಟಪ್‌ನಲ್ಲಿ ದೋಷ ಹೊಂದಿದ್ರಿಂದ ಈ ವಾಹನಗಳನ್ನು ಹಿಂಪಡೆಯಲಾಗಿದೆ. ಈ ಬಗ್ಗೆ ಕಾರು ತಯಾರಕ ಕಂಪನಿ ಮಾರುತಿ ಸುಜುಕಿ ಸೋಮವಾರ ಈ ಹೇಳಿಕೆಯನ್ನು ನೀಡಿದೆ.

ವಾಹನಗಳು ಕಳೆದ ಎರಡು ವರ್ಷಗಳಿಂದ ತಯಾರಿಸಲ್ಪಟ್ಟಿವೆ. ಎಸ್-ಪ್ರೆಸ್ಸೊ ಮತ್ತು ಇಕೊ ವ್ಯಾನ್‌ ಅನ್ನು ಹೊಂದಿರುವ ವಾಹನ ಮಾಲೀಕರಿಗೆ ಸಮಸ್ಯೆಯನ್ನು ಪರಿಹರಿಸಲು ಹತ್ತಿರದ ವಿತರಕರನ್ನು ಸಂಪರ್ಕಿಸಲು ತಿಳಿಸಲಾಗುವುದು ಎಂದು ಕಾರು ತಯಾರಕರು ಭರವಸೆ ನೀಡಿದ್ದಾರೆ.

ಸೋಮವಾರ, ಮಾರುತಿ ಸುಜುಕಿ ಎಸ್-ಪ್ರೆಸ್ಸೊ ಮತ್ತು ಇಕೊ ಮಾದರಿಗಳ 87,599 ಯುನಿಟ್‌ಗಳನ್ನು ಹಿಂಪಡೆಯುವ ಕುರಿತು ಹೇಳಿಕೆಯನ್ನು ನೀಡಿತು. ಈ ವಾಹನಗಳಲ್ಲಿನ ಸ್ಟೀರಿಂಗ್ ಟೈ ರಾಡ್ ನಲ್ಲಿ ದೋಷವಿರುವ ಶಂಕೆ ಕಂಡುಬಂದಿದೆ ಎಂದು ಕಾರು ತಯಾರಕರು ತಿಳಿಸಿದ್ದಾರೆ. ಇದು ಅಪರೂಪದ ಸಂದರ್ಭದಲ್ಲಿ, ವಾಹನದ ಸ್ಟೀರಬಿಲಿಟಿ ಮತ್ತು ನಿರ್ವಹಣೆಯ ಮೇಲೆ ಪರಿಣಾಮ ಬೀರಬಹುದು ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಎಸ್-ಪ್ರೆಸ್ಸೊ ಮತ್ತು ಇಕೊ ಮಾದರಿಗಳ ವಾಹನಗಳನ್ನು ಜುಲೈ 5, 2021 ಮತ್ತು ಈ ವರ್ಷದ ಫೆಬ್ರವರಿ 15 ರ ನಡುವೆ ತಯಾರಿಸಲಾಗಿದೆ.

ಎರಡು ವರ್ಷಗಳ ಹಿಂದೆ ಮಾರುತಿ ಸುಜುಕಿಯು ಸಿಯಾಝ್, ವಿಟಾರಾ ಬ್ರೆಝಾ ಮತ್ತು ಎಕ್ಸ್‌ಎಲ್ 6 ಪೆಟ್ರೋಲ್ ವೇರಿಯಂಟ್‌ಗಳು ಸೇರಿದಂತೆ ವಿವಿಧ ಮಾದರಿಗಳ ಸುಮಾರು ಎರಡು ಲಕ್ಷ ಯುನಿಟ್‌ಗಳನ್ನು ಹಿಂಪಡೆಯಲಾಗಿತ್ತು.  ಮೋಟಾರ್ ಜನರೇಟರ್ ಘಟಕದ ದೋಷದಿಂದಾಗಿ ಕಾರುಗಳನ್ನು ಹಿಂಪಡೆಯಲಾಗಿತ್ತು. ಅದಕ್ಕೂ ಹಿಂದಿನ ವರ್ಷದಲ್ಲಿ, ಮಾರುತಿ 1.34 ಲಕ್ಷಕ್ಕೂ ಹೆಚ್ಚು ವ್ಯಾಗನ್ಆರ್ ಮತ್ತು ಬಲೆನೊ ಹ್ಯಾಚ್‌ಬ್ಯಾಕ್‌ಗಳನ್ನು ಹಿಂಪಡೆದಿತ್ತು.

ಅಂದಹಾಗೆ, ಮಾರುತಿ ಸುಜುಕಿ ಎಸ್-ಪ್ರೆಸ್ಸೊವನ್ನು ಮೊದಲ ಬಾರಿಗೆ 2019ರಲ್ಲಿ ಪ್ರಾರಂಭಿಸಲಾಯಿತು. ಇದು ಮಾರುತಿ ಸುಜುಕಿಯಿಂದ ಜನಪ್ರಿಯ ಕೊಡುಗೆಯಾಗಿದೆ. ವಿವಿಧ ರೂಪಾಂತರಗಳನ್ನು ಅವಲಂಬಿಸಿ ಇದರ ಬೆಲೆ ರೂ. 4.25 ಲಕ್ಷದಿಂದ ರೂ. 5.99 ಲಕ್ಷ (ಎಕ್ಸ್ ಶೋ ರೂಂ ಬೆಲೆ) ವರೆಗೆ ಲಭ್ಯವಿದೆ. ಇದು ಆಲ್ಟೊ ಕೆ10 ಮಾದರಿಗಳಲ್ಲಿ ಬಳಸಲಾಗುವ ಅದೇ 1.0-ಲೀಟರ್ ಪೆಟ್ರೋಲ್ ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತದೆ.

ಇನ್ನು ಮಾರುತಿ ಇಕೋ ಅತ್ಯಂತ ಜನಪ್ರಿಯ ವ್ಯಾನ್‌ಗಳಲ್ಲಿ ಒಂದಾಗಿದೆ. ಇದನ್ನು ಮೊದಲು 2010 ರಲ್ಲಿ ಪ್ರಾರಂಭಿಸಲಾಯಿತು. ಇಕೋ ಬಹುಪಯೋಗಿ ವ್ಯಾನ್ 1.2 ಲೀಟರ್ ಸುಧಾರಿತ ಕೆ-ಸೀರೀಸ್ ಡ್ಯುಯಲ್-ಜೆಟ್, ಡ್ಯುಯಲ್ ವಿವಿಟಿ ಎಂಜಿನ್‌ನಿಂದ ಚಾಲಿತವಾಗಿದೆ. ಇದು ಸಿಎನ್ ಜಿ ರೂಪಾಂತರದೊಂದಿಗೆ ಸಹ ಲಭ್ಯವಿದೆ. ಈ ವ್ಯಾನ್ ಪೆಟ್ರೋಲ್‌ಗೆ 6,000 rpm ನಲ್ಲಿ 80.76 ಪಿಎಸ್ ಗರಿಷ್ಠ ಶಕ್ತಿಯನ್ನು ಮತ್ತು ಸಿಎನ್ ಜಿ ರೂಪಾಂತರಕ್ಕಾಗಿ 6,000 rpm ನಲ್ಲಿ 71.65 ಪಿಎಸ್ ಪವರ್ ಅನ್ನು ಹೊರಹಾಕಲು ಉತ್ತಮವಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read