ಮಾರುತಿ ಸುಜುಕಿ eVX ಎಲೆಕ್ಟ್ರಿಕ್ SUV ಲುಕ್‌ ಬಹಿರಂಗ

ಪರಿಸರಕ್ಕೆ ಹಾನಿಯಾಗದಂತಹ ಎಲೆಕ್ರ್ಟಿಕ್ ವಾಹನಗಳು ಇಂದು ಹೆಚ್ಚಾಗಿ ರಸ್ತೆಗಿಳಿಯುತ್ತಿವೆ. ವಿವಿಧ ಕಂಪನಿಗಳು ಇವಿ ತಯಾರಿಸುತ್ತಿವೆ. ಮಾರುತಿ ಸುಜುಕಿ ಇಂಡಿಯಾ ತನ್ನ ಚೊಚ್ಚಲ ಎಲೆಕ್ಟ್ರಿಕ್ ವಾಹನವನ್ನು (EV) ಪ್ರಸ್ತುತ ಆರ್ಥಿಕ ವರ್ಷದ ಅಂತ್ಯದ ವೇಳೆಗೆ ಭಾರತದಲ್ಲಿ ಬಿಡುಗಡೆ ಮಾಡಲಿದೆ. eVX ಎಲೆಕ್ಟ್ರಿಕ್ SUV ಅನ್ನು ದೆಹಲಿಯಲ್ಲಿ ಜರುಗಿದ ಆಟೋ ಎಕ್ಸ್ ಪೋ 2023 ರಲ್ಲಿ ಅದರ ಪರಿಕಲ್ಪನೆಯ ರೂಪದಲ್ಲಿ ಅನಾವರಣಗೊಳಿಸಲಾಯಿತು. ಇದೀಗ ಪೋಲೆಂಡ್‌ನ ಕ್ರಾಕೋವ್‌ನಲ್ಲಿ ಪರಿಕ್ಷಾರ್ಥ ಸಂಚಾರ ನಡೆಸುವಾಗ ಕ್ಯಾಮೆರಾ ಕಣ್ಣಿಗೆ ಬಿದ್ದಿದೆ.

ಈ ವರ್ಷದ ಆರಂಭದಲ್ಲಿ ಜನವರಿಯಲ್ಲಿ ಸುಜುಕಿ ಮೋಟಾರ್ ಕಾರ್ಪೊರೇಷನ್ ಘೋಷಿಸಿದಂತೆ 2030 ರ ವೇಳೆಗೆ ತನ್ನ ಪೋರ್ಟ್‌ಫೋಲಿಯೊದಲ್ಲಿ ಆರು ಎಲೆಕ್ಟ್ರಿಕ್ ಮಾದರಿಗಳನ್ನು ಹೊಂದಿರುತ್ತದೆ.

FY30 ರ ವೇಳೆಗೆ EV ಗಳು ಮಾರುತಿಯ ಪೋರ್ಟ್‌ಫೋಲಿಯೊದಲ್ಲಿ 15% ಪಾಲನ್ನು ಹೊಂದಿರುತ್ತದೆ. ಹೈಬ್ರಿಡ್‌ಗಳು 25% ಕೊಡುಗೆ ನೀಡಿದರೆ, ಆಂತರಿಕ ದಹನಕಾರಿ ಎಂಜಿನ್ (ICE) ಮಾದರಿಗಳು ಇನ್ನೂ 60% ನಲ್ಲಿ ಬೃಹತ್ ಪಾಲನ್ನು ಹೊಂದಿರುತ್ತವೆ

ಮಾರುತಿ ಸುಜುಕಿ eVX ಎಲೆಕ್ಟ್ರಿಕ್ SUV ಹೊಸ ಮೀಸಲಾದ EV ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದೆ. ಇದು 4,300 ಎಂಎಂ ಉದ್ದ, 1,800 ಎಂಎಂ ಅಗಲ ಮತ್ತು 1,600 ಎಂಎಂ ಎತ್ತರವಿರುತ್ತದೆ.

eVX ಒಂದು ಸಂಪೂರ್ಣ ಚಾರ್ಜ್‌ನಲ್ಲಿ 550km ವರೆಗೆ ಸಂಚರಿಸುತ್ತದೆ ಮತ್ತು ಸುರಕ್ಷಿತ ಬ್ಯಾಟರಿ ತಂತ್ರಜ್ಞಾನದೊಂದಿಗೆ 60kWh ಬ್ಯಾಟರಿ ಪ್ಯಾಕ್ ಅನ್ನು ಬಳಸಿಕೊಳ್ಳುತ್ತದೆ.

ಇವಿಗಳು ಮತ್ತು ಅವುಗಳ ಬ್ಯಾಟರಿಗಳ ಸ್ಥಳೀಯ ಉತ್ಪಾದನೆಗೆ ರೂ 10,000 ಕೋಟಿಗೂ ಹೆಚ್ಚು ಹೂಡಿಕೆ ಮಾಡಲು ಎಸ್‌ಎಂಸಿ ಮಾರ್ಚ್ 2022 ರಲ್ಲಿ ಗುಜರಾತ್ ಸರ್ಕಾರದೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿತು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read