ಮೈಸೂರು : ಲಾಡ್ಜ್’ ನಲ್ಲಿ ವಿವಾಹಿತ ಮಹಿಳೆಯ ಬರ್ಬರ ಹತ್ಯೆಯಾಗಿದ್ದು, ಪ್ರಿಯಕರನೇ ಈ ಕೃತ್ಯ ಎಸಗಿದ್ದಾನೆ. ಮೈಸೂರು ಜಿಲ್ಲೆಯ ಸಾಲಿಗ್ರಾಮ ತಾಲೂಕಿನ ಭೇರ್ಯ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಜಿಲೆಟಿನ್ ಕಡ್ಡಿ ಬಾಯಿಗೆ ಇಟ್ಟು ಸ್ಪೋಟಿಸಿ ಮಹಿಳೆಯನ್ನು ಪ್ರಿಯಕರ ಸಿದ್ದರಾಜು ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಗೆರಸನಹಳ್ಳಿ ಗ್ರಾಮದ ರಕ್ಷಿತಾ (20) ಎಂಬ ಮಹಿಳೆಯ ಕೊಲೆಯಾಗಿದೆ. ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಸಿದ್ದರಾಜು ಎಂಬ ಯುವಕನನ್ನು ಸಾಲಿಗ್ರಾಮದ ಪೊಲೀಸರು ಬಂಧಿಸಿದ್ದಾರೆ.
ರಕ್ಷಿತಾ ಕೇರಳ ಮೂಲದ ಯುವಕನನ್ನು ಮದುವೆಯಾಗಿದ್ದರು. ಆದರೆ ಸಿದ್ದರಾಜು ಜೊತೆ ಅನೈತಿಕ ಸಂಬಂಧ ಹೊಂದಿದ್ದರು ಎನ್ನಲಾಗಿದೆ. ರಕ್ಷಿತಾಳನ್ನು ಲಾಡ್ಜ್ ಗೆ ಕರೆಸಿಕೊಂಡ ಯುವಕ ಆಕೆಯ ಬಾಯಿಗೆ ಜಿಲೆಟಿನ್ ಕಡ್ಡಿ ಇಟ್ಟು ಬ್ಲಾಸ್ಟ್ ಮಾಡಿ ಹತ್ಯೆ ಮಾಡಿದ್ದಾನೆ.
ಕಪ್ಪಡಿ ಕ್ಷೇತ್ರಕ್ಕೆ ಹೋಗೋಣ ಎಂದು ಸಿದ್ದರಾಜು ರಕ್ಷಿತಾಳನ್ನು ಬರಲು ಹೇಳಿದ್ದನು. ಲಾಡ್ಜ್ ನಲ್ಲಿ ರಕ್ಷಿತಾರನ್ನು ಕೊಲೆ ಮಾಡಿದ ಬಿಳಿಕೆರೆ ಗ್ರಾಮದ ಸಿದ್ದರಾಜು ಮೊದಲು ಮೊಬೈಲ್ ಬ್ಲಾಸ್ಟ್ ಕಥೆ ಕಟ್ಟಿದ್ದನು. ನಂತರ ತನಿಖೆ ನಡೆಸಿದಾಗ ಅಸಲಿ ವಿಚಾರ ಬಯಲಾಗಿದೆ.