ಪ್ರಾಣ ಪ್ರತಿಷ್ಠೆ ದಿನವೇ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಜೋಡಿ: ಮದುವೆಗೆ ಸಾಕ್ಷಿಯಾದ ಶ್ರೀರಾಮ

ದಾವಣಗೆರೆ: ಅಯೋಧ್ಯೆ ಶ್ರೀರಾಮ ಮಂದಿರದಲ್ಲಿ ಬಾಲರಾಮಮೂರ್ತಿ ಪ್ರಾಣ ಪ್ರತಿಷ್ಠಾಪನೆ ಕಾರ್ಯ ಸೋಮವಾರ ನೆರವೇರಿದೆ. ಅದೇ ದಿನ ದಾವಣಗೆರೆಯಲ್ಲಿ ನಡೆದ ಮದುವೆಯಲ್ಲಿಯೂ ಶ್ರೀ ರಾಮನ ಜಪ ಮಾಡಲಾಗಿದೆ.

ದಾವಣಗೆರೆಯ ಬಾಪೂಜಿ ಸಮುದಾಯ ಭವನದಲ್ಲಿ ರೋಹಿತ್ ಮತ್ತು ಅರ್ಪಿತಾ ಅವರ ಮದುವೆ ನೆರವೇರಿದೆ. ಸಭಾಂಗಣದ ಸ್ಟೇಜ್ ಬ್ಯಾಗ್ರೌಂಡ್ ನಲ್ಲಿ ಶ್ರೀರಾಮನ ಕಟೌಟ್ ಅಳವಡಿಸಲಾಗಿದ್ದು, ಕಟೌಟ್ ಎದುರುಗಡೆ ಮದುವೆ ಶಾಸ್ತ್ರ ನೆರವೇರಿಸಲಾಗಿದೆ. ನಂತರ ಪ್ರಭು ಶ್ರೀರಾಮನಿಗೆ ನಮಿಸಿದ ನವಜೋಡಿ ಆಶೀರ್ವಾದ ಪಡೆದುಕೊಂಡಿದ್ದಾರೆ. ಮದುವೆಗೆ ಆಗಮಿಸಿದ್ದ ಬಂಧು ಬಾಂಧವರೊಂದಿಗೆ ಜೈಶ್ರೀರಾಮ್ ಘೋಷಣೆ ಕೂಗಿ ಸಂಭ್ರಮಿಸಿದ್ದಾರೆ. ನಮ್ಮ ಮದುವೆಗೆ ಶ್ರೀರಾಮನೇ ಸಾಕ್ಷಿಯಾದಂತಿದೆ ಎಂದು ನವದಂಪತಿ ಸಂತಸ ವ್ಯಕ್ತಪಡಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read