ಮದುವೆಯಾಗಲಿಚ್ಚಿಸುವ ಜೋಡಿಗಳಿಗೆ ಗುಡ್ ನ್ಯೂಸ್: ಉಚಿತ ಸಾಮೂಹಿಕ ವಿವಾಹದಲ್ಲಿ ವಸ್ತ್ರ, ಮಾಂಗಲ್ಯ, 5,000 ರೂ. ಪ್ರೋತ್ಸಾಹ ಧನ

ಹೊಸಕೋಟೆ: ಗೊಟ್ಟಿಪುರ ಯೋಗಿ ನಾರಾಯಣ ಯತೀಂದ್ರರ ಆಶ್ರಮದಲ್ಲಿ 43ನೇ ವರ್ಷದ ಆರಾಧನೆ, 523ನೇ ಪೌರ್ಣಮಿ ಪೂಜೆ ಅಂಗವಾಗಿ ಏಪ್ರಿಲ್ 21 ರಂದು ಬೆಳಿಗ್ಗೆ 8 ಗಂಟೆಗೆ ಉಚಿತ ಸಾಮೂಹಿಕ ವಿವಾಹ ಮಹೋತ್ಸವ ಏರ್ಪಡಿಸಲಾಗಿದೆ.

ವಧು, ವರರಿಗೆ ಬಟ್ಟೆ, ಮಾಂಗಲ್ಯ, ಹೂವಿನ ಹಾರ ಜೊತೆಗೆ ಪ್ರತಿ ಜೋಡಿಗೆ ಕುಟುಂಬ ನಿರ್ವಹಣೆಗೆ ಪ್ರೋತ್ಸಾಹ ಧನವಾಗಿ 5000 ರೂ. ನಗದು ನೀಡಲಾಗುವುದು.

ಸಾಮೂಹಿಕ ಮದುವೆಯಲ್ಲಿ ಎರಡನೇ ವಿವಾಹಕ್ಕೆ ಅವಕಾಶವಿಲ್ಲ. ಆಧಾರ್ ಕಾರ್ಡ್ ಕಡ್ಡಾಯವಾಗಿ ತರಬೇಕಿದ್ದು, ಏಪ್ರಿಲ್ 19 ನೋಂದಣಿಗೆ ಕೊನೆಯ ದಿನವಾಗಿದೆ. ಹೆಚ್ಚಿನ ವಿವರಗಳಿಗಾಗಿ 74832 20837 ಸಂಪರ್ಕಿಸಬಹುದು.

ದುಂದು ವೆಚ್ಚ ತಡೆಯುವ ನಿಟ್ಟಿನಲ್ಲಿ 43 ವರ್ಷಗಳಿಂದ ಸಾಮೂಹಿಕ ವಿವಾಹ ನಡೆಸಲಾಗುತ್ತಿದೆ. ಎಂದು ಮಠಾಧೀಶರಾದ ಮುನಿಸ್ವಾಮಿ ಮಹಾಸ್ವಾಮಿಗಳು ತಿಳಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read