ಮುಂಬೈ: ಮುರಾಠಾ ಮೀಸಲಾತಿಗೆ ಒತ್ತಾಯಿಸಿ ಮುಂಬೈನ ಸೆಂಟ್ರಲ್ ರೈಲ್ವೆ ನಿಲ್ದಾಣದ ಬಳಿ ಇರುವ ಆಜಾದ್ ಮೈದಾನದಲ್ಲಿ ನಡೆಯುತ್ತಿರುವ ಉಪವಾಸ ಸತ್ಯಾಗ್ರಹ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದೆ. ಸತ್ಯಾಗ್ರಹದಲ್ಲಿ ಪಾಲ್ಗೊಂಡಿರುವ ಮನೋಜ್ ಜರಾಂಗೆ ಬೆಂಬಲಿಗರು ‘ನಮಗೆ ಮೀಸಲಾತಿ ನೀಡಲು ನಿಮ್ಮಿಂದ ಆಗದಿದ್ದರೆ ಗುಂಡಿಟ್ಟು ಸಾಯಿಸಿ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಉಪವಾಸ ಸತ್ಯಾಗ್ರಹದಲ್ಲಿ ಪಾಲ್ಗೊಂಡಿರುವ ನಾಂದೇಡ್ ರೈತ ಮಾರುತಿ ಪಾಟೀಲ್, ನಮಗೆ ಮೀಸಲಾತಿ ಸಿಗುವವರೆಗೂ ವಾಪಸ್ ತೆರಳುವುದಿಲ್ಲ. ನಮಗೆ ಮೀಸಲಾತಿ ನೀಡಲು ಸಾಧ್ಯವಿಲ್ಲದಿದ್ದರೆ ನಮ್ಮನ್ನು ಗುಂಡಿಟ್ಟು ಸಾಯಿಸಿ ಎಂದು ಕಿಡಿಕಾರಿದ್ದಾರೆ.
ನಮಗೆ ಮೀಸಲಾತಿ ದೊರೆಯದಿದ್ದರೆ ನಾವು ಬದುಕಲು ಬಯಸುವುದಿಲ್ಲ. ಸರ್ಕಾರ ನಮ್ಮನ್ನು ಕಂಡಲ್ಲಿ ಗುಂಡಿಕ್ಕಿ ಕೊಲ್ಲಲಿ. ನಮ್ಮ ಬದುಕು ಎಷ್ಟು ದುಸ್ತರವಾಗಿದೆ ಎಂದು ಸರ್ಕಾರಕ್ಕೆ ಗೊತ್ತಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.