ತಾಯಿಗೆ ಹುಟ್ಟುಹಬ್ಬದ ವಿಷ್​ ಮಾಡಲು ನಟನಿಂದ 151 ಕಿಮೀ ಸೈಕಲ್​ ಪ್ರಯಾಣ….!

ಥಾಣೆ: ಮರಾಠಿ ದೂರದರ್ಶನ ಉದ್ಯಮದ ಅನೇಕ ಕಲಾವಿದರು ಈ ಬೇಸಿಗೆಯಲ್ಲಿ ವಿರಾಮ ತೆಗೆದುಕೊಂಡಿದ್ದಾರೆ ಮತ್ತು ರಜೆಗಾಗಿ ತಮ್ಮ ಊರುಗಳಿಗೆ ಭೇಟಿ ನೀಡಲು ನಿರ್ಧರಿಸಿದ್ದಾರೆ.

ಮರಾಠಿ ನಟ ಸಂಕೇತ್ ಕೊರ್ಲೆಕರ್ ಅವರು ಅದೇ ರೀತಿ ಮಾಡಿದ್ದಾರೆ. ಆದರೆ ತಮ್ಮ ಹುಟ್ಟೂರನ್ನು ತಲುಪಲು ಅಸಾಮಾನ್ಯ ಮಾರ್ಗವನ್ನು ಆರಿಸಿಕೊಂಡಿದ್ದಾರೆ. ವರದಿಗಳ ಪ್ರಕಾರ, ಸಂಕೇತ್ ತನ್ನ ಸ್ವಂತ ಊರಾದ ಕೊಂಕಣವನ್ನು ತಲುಪಿದ್ದಾರೆ. ಕಾರು ಮತ್ತು ಬೈಕು ಹೊಂದಿದ್ದರೂ 151 ಕಿಲೋಮೀಟರ್ ಸೈಕಲ್ ಸವಾರಿ ಮಾಡಿದ್ದಾರೆ.

ನಟ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ವೀಡಿಯೊ ನೋಡಿದ ನೆಟ್ಟಿಗರು, ಬೈಸಿಕಲ್‌ನಲ್ಲಿ 151 ಕಿಲೋಮೀಟರ್ ದೂರದ ಪ್ರಯಾಣಕ್ಕಾಗಿ ಅಭಿನಂದಿಸಿದ್ದಾರೆ. ಥಾಣೆಯಿಂದ ಪ್ರಯಾಣ ಆರಂಭಿಸಿದ ಸಾಕೇತ್ 15 ಗಂಟೆಗಳ ನಂತರ ಮುರುದ್ ತಲುಪಿದ್ದಾರೆ ಎಂಬುದು ವಿಡಿಯೋದಿಂದ ಬಹಿರಂಗವಾಗಿದೆ.

ಊರು ತಲುಪಿದ ಕೂಡಲೇ ಅಮ್ಮನಿಗೆ ಅಭಿನಂದಿಸಿದರು. ವರದಿಯ ಪ್ರಕಾರ, ನಟ ತಮ್ಮ ತಾಯಿಯ 51 ನೇ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಲು ಇಲ್ಲಿಯವರೆಗೆ ಪ್ರಯಾಣಿಸಿದ್ದಾರೆ ಮತ್ತು ಅವರ ವಿಶೇಷ ದಿನದಂದು ಅವರನ್ನು ಅಚ್ಚರಿಗೊಳಿಸಲು ಬಯಸಿದ್ದರು.

ಇಂದು ತನ್ನ ತಾಯಿಯ ಜನ್ಮದಿನವಾಗಿದ್ದು, ಈ ದಿನವನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ.ಆಕೆಯನ್ನು ಆಶ್ಚರ್ಯಗೊಳಿಸಲು ಬಯಸಿದ್ದೆನು. ಅದಕ್ಕಾಗಿ ಮುಂಬೈನಿಂದ ಕೊಂಕಣಕ್ಕೆ ಬೈಸಿಕಲ್ನಲ್ಲಿ 151 ಕಿಲೋಮೀಟರ್ ಪ್ರಯಾಣಿಸಲು ನಿರ್ಧರಿಸಿದೆ ಎಂದಿದ್ದಾರೆ. ಇದಕ್ಕೆ ಅಭಿನಂದನೆಗಳ ಮಹಾಪೂರ ಹರಿದು ಬಂದಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read