ಪ್ಯಾರಿಸ್ ಒಲಂಪಿಕ್ಸ್ ನಲ್ಲಿ ಭಾರತದ ಹಿರಿಮೆ ಹೆಚ್ಚಿಸಿದ್ದ ಮನು ಭಾಕರ್ ಹ್ಯಾಟ್ರಿಕ್ ಕನಸು ಭಗ್ನವಾಗಿದ್ದು, 25 ಮೀ. ಪಿಸ್ತೂಲ್ ಫೈನಲ್ ನಲ್ಲಿ 4 ನೇ ಸ್ಥಾನಕ್ಕೆ ತೃಪ್ತಿ ಪಟ್ಟಿದ್ದಾರೆ.
ಹೌದು, ಪ್ಯಾರಿಸ್ ಒಲಿಂಪಿಕ್ಸ್ 2024 ರ ಮಹಿಳಾ 25 ಮೀಟರ್ ಪಿಸ್ತೂಲ್ ಫೈನಲ್ನಲ್ಲಿ ಭಾರತದ ಶೂಟರ್ ಮನು ಭಾಕರ್ 4 ನೇ ಸ್ಥಾನ ಪಡೆದ ನಂತರ ಪದಕವನ್ನು ಕಳೆದುಕೊಂಡರು.
ಫ್ರೆಂಚ್ ರಾಜಧಾನಿಯಲ್ಲಿ ನಡೆಯುತ್ತಿರುವ ಒಲಿಂಪಿಕ್ಸ್ನಲ್ಲಿ ಮನು 3 ನೇ/4 ನೇ ಸ್ಥಾನದ ಎಲಿಮಿನೇಷನ್ ಪ್ಲೇಆಫ್ನಲ್ಲಿ ಸೋತು ಮೂರನೇ ಪದಕವನ್ನು ಕಳೆದುಕೊಂಡರು. ಬಿಲ್ಲುಗಾರಿಕೆಯಲ್ಲಿ ದೀಪಿಕಾ ಕುಮಾರಿ ಮಹಿಳೆಯರ ವೈಯಕ್ತಿಕ ರೌಂಡ್ ಆಫ್ 16 ಟೈನಲ್ಲಿ ಜರ್ಮನಿಯ ಎದುರಾಳಿಯನ್ನು ಎದುರಿಸಲಿದ್ದಾರೆ. ಮಹಿಳೆಯರ ವೈಯಕ್ತಿಕ ರೌಂಡ್ ಆಫ್ 16ರಲ್ಲಿ ಭಜನ್ ಕೌರ್ ಕಣಕ್ಕಿಳಿಯಲಿದ್ದಾರೆ. ಪುರುಷರ 71 ಕೆಜಿ ವಿಭಾಗದ ಕ್ವಾರ್ಟರ್ ಫೈನಲ್ನಲ್ಲಿ ನಿಶಾಂತ್ ದೇವ್ ಸೆಣಸಲಿದ್ದಾರೆ. ಅವರು ಭಾರತಕ್ಕೆ ಪದಕವನ್ನು ಖಚಿತಪಡಿಸಲು ಒಂದು ಗೆಲುವಿನ ದೂರದಲ್ಲಿದ್ದಾರೆ.
🇮🇳💔 𝗜𝘁 𝗷𝘂𝘀𝘁 𝘄𝗮𝘀𝗻'𝘁 𝗺𝗲𝗮𝗻𝘁 𝘁𝗼 𝗯𝗲! Despite another strong performance from Manu Bhaker in the final, she unfortunately missed out on securing a third Olympic medal at #Paris2024.
👏 Keep your chin up queen, you have already made India proud with your efforts!… pic.twitter.com/ImWJmwmKDb
— Sportwalk Media (@sportwalkmedia) August 3, 2024