ನಟ ಮನೋಜ್ ಬಾಜಪೇಯಿ ಅವರ ಸಲಹೆಗೆ ನಟಿ ಸಮಂತಾ ರುತ್ ಪ್ರಭುರವರ ಪ್ರತಿಕ್ರಿಯೆ ಭಾರೀ ವೈರಲ್ ಆಗಿದೆ.
ಅಪರೂಪದ ಕಾಯಿಲೆಯಿಂದ ಬಳಲುತ್ತಿರುವ ನಟಿ ಸಮಂತಾ ರುತ್ ಪ್ರಭುಗೆ ಫ್ಯಾಮಿಲಿ ಮ್ಯಾನ್ ಸಹನಟ ಮನೋಜ್ ಬಾಜಪೇಯಿ ಅವರು ನೀವು “ನಿಮ್ಮೊಂದಿಗೆ ಸುಲಭವಾಗಿ ಮುಂದೆ ಹೋಗಿ ” ಎಂದು ಹೇಳಲು ಬಯಸುತ್ತೇನೆಂದು ಸಮಂತಾಗೆ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.
ತಮ್ಮ ಮುಂಬರುವ ಚಿತ್ರ ಗುಲ್ಮೊಹರ್‌ನ ಪ್ರಚಾರ ಕಾರ್ಯಕ್ರಮವೊಂದರಲ್ಲಿ ಮನೋಜ್ ಬಾಜಪೇಯಿಗೆ ಸಮಂತಾ ಬಗ್ಗೆ ಏನಾದರೂ ಹೇಳಲು ಕೇಳಿದಾಗ, “ನಿಮ್ಮೊಂದಿಗೆ ಸುಲಭವಾಗಿ ಮುಂದೆ ಹೋಗಿ. ಅವರು ತುಂಬಾ ಶ್ರಮಜೀವಿ. ಫ್ಯಾಮಿಲಿ ಮ್ಯಾನ್ ಸೆಟ್ ನಲ್ಲಿ ಅವರು ದೈಹಿಕವಾಗಿ ತುಂಬಾ ಕೆಲಸ ಮಾಡುತ್ತಿದ್ದುದನ್ನ ನಾನು ನೋಡಿದ್ದೇನೆ. ನನಗೆ ಭಯವಾಯಿತು. ಕಿತ್ನಾ ಸತಾ ರಹೀ ಹೈ ಆಪ್ನೆ ಆಪ್ಕೋ ಯೇ” ಎಂದು ಸಮಂತಾ ಬಗ್ಗೆ ಹೇಳಿದ್ದಾರೆ.
ಟ್ವಿಟರ್‌ನಲ್ಲಿ ನಟನ ಸಂದರ್ಶನದ ತುಣುಕನ್ನು ಹಂಚಿಕೊಂಡಿರುವ ಸಮಂತಾ, “ನಾನು ಪ್ರಯತ್ನಿಸುತ್ತೇನೆ ಸರ್” ಎಂದು ಬರೆದಿದ್ದಾರೆ. ಇದರೊಂದಿಗೆ ಅವರು ಅಪ್ಪುಗೆ ಮತ್ತು ಹೃದಯದ ಎಮೋಜಿಗಳನ್ನು ಕೂಡ ಸೇರಿಸಿದ್ದಾರೆ.
ನಟನ ಸಲಹೆ ಮತ್ತು ಅಭಿಪ್ರಾಯಗಳಿಗೆ ಪ್ರತಿಕ್ರಿಯಿಸಿರುವ ಸಮಂತಾ ನಡೆಯ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿದ್ದು ಅವರ ಪ್ರತಿಕ್ರಿಯೆ ವೈರಲ್ ಆಗಿದೆ.
https://twitter.com/Samanthaprabhu2/status/1625785142181773312?ref_src=twsrc%5Etfw%7Ctwcamp%5Etweetembed%7Ctwterm%5E1625785142181773312%7Ctwgr%5Ea2226e5d16d04a4aaee5ff20f91565c07fd3f834%7Ctwcon%5Es1_&ref_url=https%3A%2F%2Fwww.ndtv.com%2Fentertainment%2Fhey-samantha-ruth-prabhu-there-is-a-message-from-manoj-bajpayee-3787191