‘ಮನ್ ಕಿ ಬಾತ್’: ಅಂಗಾಂಗ ದಾನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ನೋಂದಾಯಿಸಲು ಕರೆ ನೀಡಿದ ಮೋದಿ

ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ತಮ್ಮ ಮಾಸಿಕ ರೇಡಿಯೋ ಕಾರ್ಯಕ್ರಮ ‘ಮನ್ ಕಿ ಬಾತ್’ ನ 99 ನೇ ಸಂಚಿಕೆಯಲ್ಲಿ ಅಂಗಾಂಗ ದಾನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ನೋಂದಾಯಿಸುವಂತೆ ಕರೆ ನೀಡಿದ್ದಾರೆ.

2013ರಲ್ಲಿ 5,000 ಅಂಗಾಂಗ ದಾನ ಪ್ರಕರಣಗಳು ದಾಖಲಾಗಿದ್ದು, 2022ರಲ್ಲಿ 15,000 ಕ್ಕೂ ಹೆಚ್ಚಿದೆ ಎಂದು ಪ್ರಧಾನಿ ಹೇಳಿದ್ದು, ಕಾರ್ಯಕ್ರಮದ ಸಂದರ್ಭದಲ್ಲಿ ಪಂಜಾಬ್‌ನ ಅಮೃತಸರದ ಸುಖ್ಬೀರ್ ಸಿಂಗ್ ಮತ್ತು ಅವರ ಪತ್ನಿ ಸುಪ್ರೀತ್ ಕೌರ್ ಅವರೊಂದಿಗೆ ಪ್ರಧಾನಿ ಮಾತನಾಡಿದರು, ಅವರ ಮಗಳು ಅಬಾಬತ್ ಕೌರ್ 39 ದಿನಗಳ ವಯಸ್ಸಿನಲ್ಲಿ ಕಿರಿಯ ದಾನಿಯಾಗಿದ್ದಾರೆ.

ನಮ್ಮ ಮಗಳ ಮಿದುಳಿನಲ್ಲಿ ಟ್ಯೂಮರ್ ಇದ್ದು, ಹಲವು ದಿನಗಳ ಕಾಲ ಹೋರಾಡಿ 39ನೇ ದಿನಕ್ಕೆ ಕೊನೆಯುಸಿರೆಳೆದಿದ್ದಾಳೆ, ಆದರೆ ಈ ಮಗು ಇಹಲೋಕಕ್ಕೆ ಬರಲು ಏನಾದರೂ ಉದ್ದೇಶವಿದೆ ಎಂದು ಭಾವಿಸಿದ್ದೆವು, ಹೀಗಾಗಿ ಆಕೆಯ ಅಂಗಾಂಗ ದಾನ ಮಾಡಲು ನಿರ್ಧರಿಸಿದೆವು’ ಎಂದು ಸುಖಬೀರ್ ಸಿಂಗ್ ಹೇಳಿದ್ದಾರೆ.

‘ದಿ ಎಲಿಫೆಂಟ್ ವಿಸ್ಪರರ್ಸ್’ ಸಾಕ್ಷ್ಯಚಿತ್ರಕ್ಕಾಗಿ ಆಸ್ಕರ್ ಪ್ರಶಸ್ತಿಯನ್ನು ಗೆಲ್ಲುವ ಮೂಲಕ ದೇಶಕ್ಕೆ ಪ್ರಶಸ್ತಿಗಳನ್ನು ತಂದ ನಿರ್ಮಾಪಕ ಗುನೀತ್ ಮೊಂಗಾ ಮತ್ತು ನಿರ್ದೇಶಕ ಕಾರ್ತಿಕಿ ಗೊನ್ಸಾಲ್ವಿಸ್ ಅವರನ್ನು ಪ್ರಧಾನಿ ಶ್ಲಾಘಿಸಿದರು.

ವಂದೇ ಭಾರತ್ ಎಕ್ಸ್‌ಪ್ರೆಸ್‌ನ ಮೊದಲ ಮಹಿಳಾ ಲೋಕೋ ಪೈಲಟ್ ಎಂಬ ಮತ್ತೊಂದು ದಾಖಲೆಯನ್ನು ನಿರ್ಮಿಸಿದ ಏಷ್ಯಾದ ಮೊದಲ ಮಹಿಳಾ ಲೋಕೋ ಪೈಲಟ್ ಸುರೇಖಾ ಯಾದವ್ ಕುರಿತು ಅವರು ಮಾತನಾಡಿದರು. ದೇಶಕ್ಕೆ ಮತ್ತೊಂದು ಸಾಧನೆಯನ್ನು ಮಾಡಿದ ಭಾಭಾ ಅಣು ಸಂಶೋಧನಾ ಕೇಂದ್ರದ ವಿಜ್ಞಾನಿ ಜ್ಯೋತಿರ್ಮಯಿ ಮೊಹಾಂತಿ ಅವರ ಬಗ್ಗೆ ಪ್ರಸ್ತಾಪಿಸಿದರು.

ನಾಗಾಲ್ಯಾಂಡ್‌ನಲ್ಲಿ 75 ವರ್ಷಗಳಲ್ಲಿ ಮೊದಲ ಬಾರಿಗೆ ಇಬ್ಬರು ಮಹಿಳಾ ಶಾಸಕರು ತಮ್ಮ ಗೆಲುವಿನ ಮೂಲಕ ವಿಧಾನಸಭೆ ತಲುಪಿದ್ದಾರೆ ಎಂದು ಮೋದಿ ಹೇಳಿದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read