ಮಣಿಪುರ ಹಿಂಸಾಚಾರ: ಇಬ್ಬರು ಮಹಿಳೆಯರ ಬರ್ಬರ ಹತ್ಯೆ

ಮಣಿಪುರದಲ್ಲಿ ಹಿಂಸಾಚಾರ ಮುಂದುವರೆದಿದ್ದು, ಕಳೆದ 48 ಗಂಟೆಗಳಲ್ಲಿ ಇಬ್ಬರು ಮಹಿಳೆಯರನ್ನು ಹತ್ಯೆ ಮಾಡಲಾಗಿದೆ.

ಹೊಲಕ್ಕೆ ಕೆಸಕ್ಕೆಂದು ಹೋಗುತ್ತಿದ್ದ ಮಹಿಳೆಯೊಬ್ಬರನ್ನು ದುಷ್ಕರ್ಮಿಗಳು ಗುಂಡಿಟ್ಟು ಹತ್ಯೆ ಮಾಡಿದ್ದಾರೆ. 39 ವರ್ಷದ ಸಪಮ್ ಒಂಗ್ಬಿ ಸೋಫಿಯಾ ಮೃತ ಮಹಿಳೆ. ಬಿಷ್ಣುಪುರ್ ಜಿಲ್ಲೆಯ ಸೈಟನ್ ವಾಥಾ ರಸ್ತೆಯಲ್ಲಿ ಈ ಘಟನೆ ನಡೆದಿದೆ. ದಪ್ಪಿ ಗ್ರಾಮದ ಸುತ್ತಮುತ್ತಲಿನ ಗುದ್ಡಗಳ ಮೇಲೆ ನಿಂತಿದ್ದ ದಾಳಿಕೋರರು ಸೈಟನ್-ವಾಥಾ ರಸ್ತೆಯ ಕಡೆಗೆ ಗುಂಡಿನ ದಾಳಿ ನಡೆಸಿದ್ದಾರೆ. ಈ ವೇಳೆ ಮಹಿಳೆ ಸಾವನ್ನಪ್ಪಿದ್ದಾರೆ.

ಇನ್ನೊಂದೆಡೆ ಜಿರಿಬಾಮ್ ಜಿಲ್ಲೆಯ ಝೈರೌನ್ ಗ್ರಾಮದಲ್ಲಿ ಮಹಿಳೆಯ ಮೇಲೆ ಅತ್ಯಾಚಾರವೆಸಗಿ ಬಳಿಕ ಬೆಂಕಿಯಿಟ್ಟು ಸುಟ್ಟುಹಾಕಲಾಗಿದೆ.

ಈ ನಡುವೆ ಸೊರೆಫಾ ಸಂಘಟನೆಯ ನಾಲ್ವರನ್ನು ಪೊಲೀಸರು ಬಧಿಸಿದ್ದಾರೆ. ಮಣಿಪುರದಲ್ಲಿ ಕಳೆದ ವರ್ಷದಿಂದ ಜನಾಂಗೀಯ ಘರ್ಷಣೆಯಿಂದ ಆರಂಭವಾದ ಹಿಂಸಾಚಾರ ಇದೀಗ ಮತ್ತೆ ಮುಂದುವರೆದಿದ್ದು, ರಾಜ್ಯದ ಜನತೆಯನ್ನು ಬೆಚ್ಚಿಬೀಳಿಸಿದೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read