ಮಣಿಪುರ: ಗುಂಡಿನ ಚಕಮಕಿಯಲ್ಲಿ 13 ಮಂದಿ ಸಾವು

ಮಣಿಪುರದ ತೆಂಗ್ನೌಪಾಲ್ ಜಿಲ್ಲೆಯಲ್ಲಿ ಇಂದು ಉಗ್ರರ ಎರಡು ಗುಂಪುಗಳ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಕನಿಷ್ಠ 13 ಜನರು ಸಾವನ್ನಪ್ಪಿದ್ದಾರೆ.

ಸೋಮವಾರ ಮಧ್ಯಾಹ್ನ ಲೀತು ಗ್ರಾಮದಲ್ಲಿ ಈ ಘಟನೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮ್ಯಾನ್ಮಾರ್‌ಗೆ ತೆರಳುತ್ತಿದ್ದ ಉಗ್ರಗಾಮಿಗಳ ಗುಂಪನ್ನು ಪ್ರದೇಶದಲ್ಲಿ ಪ್ರಬಲವಾಗಿರುವ ಮತ್ತೊಂದು ಗುಂಪಿನ ಬಂಡುಕೋರರು ಹೊಂಚು ಹಾಕಿ ಹೊಡೆದಿದ್ದಾರೆ ಎಂದು ಹಿಲ್ ಜಿಲ್ಲೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸ್ಥಳಕ್ಕಾಗಮಿಸಿದ ಭದ್ರತಾ ಪಡೆಗಳು ಇದುವರೆಗೆ 13 ಶವಗಳನ್ನು ಪತ್ತೆ ಮಾಡಿದ್ದು, ಅವರ ಗುರುತುಗಳು ಇನ್ನೂ ಪತ್ತೆಯಾಗಿಲ್ಲ ಆದರೆ ಅವರು ಸ್ಥಳೀಯರಲ್ಲ. ತೆಂಗ್ನೌಪಾಲ್ ಜಿಲ್ಲೆ ಮ್ಯಾನ್ಮಾರ್‌ ನೊಂದಿಗೆ ಗಡಿಯನ್ನು ಹಂಚಿಕೊಂಡಿದೆ.

ಮಣಿಪುರ ಸರ್ಕಾರವು ಏಳು ತಿಂಗಳ ನಂತರ ಭಾನುವಾರ (ಡಿಸೆಂಬರ್ 3) ಹಿಂಸಾಚಾರ ಪೀಡಿತ ರಾಜ್ಯದ ಹೆಚ್ಚಿನ ಭಾಗಗಳಲ್ಲಿ ಮೊಬೈಲ್ ಇಂಟರ್ನೆಟ್ ಸೇವೆಗಳ ಮೇಲಿನ ನಿಷೇಧವನ್ನು ತೆಗೆದುಹಾಕಿದೆ. ಆದರೆ, ಒಂಬತ್ತು ಜಿಲ್ಲೆಗಳ ಗಡಿ ಪ್ರದೇಶಗಳಲ್ಲಿ ನಿಷೇಧಾಜ್ಞೆ ಮುಂದುವರಿಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read