ಬೆಂಗಳೂರು: ಮ್ಯಾನ್ ಹೋಲ್ ಸ್ವಚ್ಛತೆಗೆದೆಂದು ಇಳಿದಿದ್ದ ಮೂವರು ಕಾರ್ಮಿಕರು ತೀವ್ರ ಅಸ್ವಸ್ಥಗೊಂಡಿರುವ ಘಟನೆ ಬೆಂಗಳೂರಿನ ನೀಲಸಂದ್ರದಲ್ಲಿ ನಡೆದಿದೆ.
ಯಾವುದೇ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದೇ ಅಧಿಕಾರಿಗಳು ಮ್ಯಾನ್ ಹೋಲ್ ಸ್ವಚ್ಛತಾ ಕಾರ್ಯಕ್ಕೆ ಮೂವರು ಕಾರ್ಮಿಕರನ್ನು ಮ್ಯಾನ್ ಹೋಲ್ ಗೆ ಇಳಿಸಿದ್ದರು. ಈ ವೇಳೆ ವಿಷಾನೀಲ ಸೇವನೆ, ಆಮ್ಲಜನಕ ಕೊರತೆಯಿಂದಾಗಿ ಮೂವರು ಕಾರ್ಮಿಕರು ತೀವ್ರ ಅಸ್ವಸ್ಥರಾಗಿದ್ದಾರೆ. ಅದರಲ್ಲಿ ಓರ್ವ ಕಾರ್ಮಿಕ ಚರಂಡಿಯೊಳಗೇ ಕುಸಿದು ಬಿದ್ದಿದ್ದಾನೆ.
ತಕ್ಷಣ ಸ್ಥಳೀಯರ ಸಹಾಯದಿಂದ ಮೂವರು ಕಾರ್ಮಿಕರನ್ನು ಮ್ಯಾನ್ ಹೋಲ್ ನಿಂದ ಮೇಲಕ್ಕೆತಲಾಗಿದ್ದು, ಅಸ್ವಸ್ಥ ಮೂವರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ.
