ಬೆಂಗಳೂರು: ಮ್ಯಾನ್ ಹೋಲ್ ಗೆ ಇಳಿದಿದ್ದ ವ್ಯಕ್ತಿ ಉಸಿರುಗಟ್ಟಿ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು, ಪೊಲೀಸರು ಬಂಧಿಸಿದ್ದಾರೆ.
ಜು.೨೧ರಂದು ಬೆಂಗಳೂರಿನ ಆರ್ ಎಂಸಿ ಯಾರ್ಡ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿತ್ತು. ಮ್ಯಾನ್ ಹೋಲ್ ಗೆ ಇಳಿದಿದ್ದ ಪುಟ್ಟಸ್ವಾಮಿ ಎಂಬುವವರು ಉಸಿರುಗಟ್ಟಿ ಅಸ್ವಸ್ಥರಾಗಿದ್ದರು. ಬಳಿಕ ಮನೆಗೆ ಹಿಂದಿರುಗುತ್ತಿದಂತೆ ಸಾವನ್ನಪ್ಪಿದ್ದರು. ಪ್ರಕರಣ ಸಂಬಂಧ ಪೊಲೀಸರು ನಾಲ್ಲ್ವರನ್ನು ಬಂಧಿಸಿದ್ದಾರೆ.
ಆಶ್ರಯ ನಗರದ ನಿವಾಸಿ ನಾಗರಾಜ್, ಆಂಥೋಣಿ, ದೇವರಾಜ್ ಹಾಗೂ ಆನಂದ್ ಬಂಧಿತರು. ಮ್ಯಾನ್ ಹೋಲ್ ಗೆ ಕಾರ್ಮಿಕರನ್ನು ಇಳಿಸಬಾರದು ಎಂಬ ಸುಪ್ರೀಂ ಕೋರ್ಟ್ ಕಾನೂನು ಇದ್ದರೂ ದೇಶದಲ್ಲಿ ಆಗಾಗ ಇಂತಹ ದುರಂತಗಳು ಸಂಭವಿಸುತ್ತಿರುತ್ತವೆ.