ಬೆಂಗಳೂರು: ಮ್ಯಾನ್ ಹೋಲ್ ಸ್ವಚ್ಛಗೊಳಿಸಲು ಇಳಿದಿದ್ದ ವ್ಯಕ್ತಿಯೊಬ್ಬರು ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಆರ್ ಎಂಸಿ ಯಾರ್ಡ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಬೆಂಗಳೂರಿನ ಆಶ್ರಯ ನಗರ ನಿವಾಸಿ ಪುಟ್ಟಸ್ವಾಮಿ ಮೃತ ವ್ಯಕ್ತಿ. ಆಂಥೋನಿ ಎಂಬುವವರ ಜೊತೆ ಪುಟ್ಟಸ್ವಾಮಿ ಮ್ಯಾನ್ ಹೋಲ್ ಗೆ ಇಳಿದು ಮ್ಯಾನ್ ಹೋಲ್ ಸ್ವಚ್ಛಗೊಳಿಸಿದ್ದರು. ಸುಮಾರು ಒಂದುಗಂಟೆ ಕಾಲ ಒಳಚರಂಡಿಗೆ ಇಳಿದು ಸ್ವಚ್ಛತಾ ಕಾರ್ಯ ನಡೆಸಿದ್ದಾರೆ. ಈ ವೇಳೆ ಉಸಿರುಗಟ್ಟಿದಂತಾಗುತ್ತಿದೆ ಎಂದು ಇಬ್ಬರೂ ಹೊರಬಂದಿದ್ದಾರೆ. ಇಬ್ಬರೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಬಳಿಕ ಮನೆಗೆ ತೆರಳಿದ್ದರು.
ಮನೆಗೆ ಬಂದು ಕೆಲ ಸಮಯದ ಬಳಿಕ ಪುಟ್ಟಸ್ವಾಮಿ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ. ಆರ್ ಎಂಸಿ ಯಾರ್ಡ್ ಪೊಲಿಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
You Might Also Like
TAGGED:ಮ್ಯಾನ್ ಹೋಲ್ ಸ್ವಚ್ಛತೆ