ಮಂಗಳೂರು: ಡಿವೈಡರ್ ಗೆ ಬೈಕ್ ಡಿಕ್ಕಿಯಾಗಿ ಇಬ್ಬರು ವಿದ್ಯಾರ್ಥಿಗಳು ಸಾವನ್ನಪ್ಪಿದ ಘಟನೆ ಮಂಗಳೂರಿನ ಕುಂಟಿಕಾನ –ಕೆಪಿಟಿ ನಡುವೆ ನಡೆದಿದೆ.
ಕೇರಳದ ಧನುರ್ವೇದ(19), ಸಂಕೀರ್ತ್(25) ಮೃತಪಟ್ಟವರು. ತಿರುವನಂತಪುರದ ಸಿ.ಬಿ. ಸ್ಯಾಮ್(25) ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.
ಸಂಕೀತ್, ಸ್ಯಾಮ್ ಡೆಂಟಲ್ ಕಾಲೇಜ್ ವಿದ್ಯಾರ್ಥಿಗಳಾಗಿದ್ದಾರೆ. ಧನುರ್ವೇದ್ ಹೋಟೆಲ್ ಮ್ಯಾನೇಜ್ಮೆಂಟ್ ವಿದ್ಯಾರ್ಥಿಯಾಗಿದ್ದು, ಈ ಮೂವರು ಕುಂಟೆಕಾನ ಸಮೀಪ ರೂಮ್ ವೊಂದರಲ್ಲಿ ನೆಲೆಸಿದ್ದರು. ಏಪ್ರಿಲ್ 8ರಂದು ಬೆಳಗಿನ ಜಾವ ಮೂವರು ಚಹಾ ಕುಡಿಯಲು ಲೋಹಿತ್ ನಗರದಿಂದ ಪಂಪ್ ವೆಲ್ ಕಡೆಗೆ ಬೈಕ್ ನಲ್ಲಿ ಹೊರಟಿದ್ದಾರೆ. ಒಂದೇ ಬೈಕ್ ನಲ್ಲಿ ಹೋಗುವಾಗ ನಿಯಂತ್ರಣ ತಪ್ಪಿದ ಬೈಕ್ ಡಿವೈಡರ್ ಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ದಿದೆ ಗಂಭೀರವಾಗಿ ಗಾಯಗೊಂಡಿದ್ದ ಸಂಕೀರ್ತ್, ಧನುರ್ವೇದ್ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ.