ಮಂಗಳೂರು: ಸರ್ಕಾರಿ ಬಸ್ ನಲ್ಲಿ ವಿದ್ಯಾರ್ಥಿನಿ ಜೊತೆ ಯುವಕನೊಬ್ಬ ಅನುಚಿತವಾಗಿ ವರ್ತಿಸಿದ್ದು, ಆರೋಪಿ ಯುವಕನನ್ನು ಹಿಡಿದು ಸ್ಥಳೀಯರು ಹಿಗ್ಗಾ ಮುಗ್ಗಾ ಥಳಿಸಿರುವ ಘಟನೆ ನಡೆದಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಈ ಘಟನೆ ನಡೆದಿದೆ. ಆರೋಪಿ ಯುವಕ ಮೊಹಮ್ಮದ್, ಪುತ್ತೂರು ಕೆ.ಎಸ್.ಆರ‍್.ಟಿ.ಸಿ ಬಸ್ ನಲ್ಲಿ ಮಂಗಳೂರಿನಿಂದ ಪುತ್ತೂರಿಗೆ ಬರುತ್ತಿದ್ದ ವಿದ್ಯಾರ್ಥಿನಿಗೆ ಕಿರುಕುಳ ನೀಡಿ ಅಸಭ್ಯವಾಗಿ ವರ್ತಿಸಿದ್ದಾನೆ.
ಬಸ್ ನಲ್ಲಿ ವಿದ್ಯಾರ್ಥಿನಿಯ ಪಕ್ಕದಲ್ಲಿಯೇ ಕುಳಿತಿದ್ದ ಆರೋಪಿ ಮೊಹಮ್ಮದ್ ಬಂಟ್ವಾಳದ ಮಾಣಿ ಬಳಿ ಅನುಚಿತವಾಗಿ ವರ್ತಿಸಿದ್ದಾನೆ. ಆರೋಪಿಗೆ ಬೈದು, ತಂದೆಗೆ ಫೋನ್ ಮಾಡಿ ವಿದ್ಯಾರ್ಥಿನಿ ವಿಷಯ ತಿಳಿಸಿದ್ದಾಳೆ. ಆರೋಪಿ ಬಸ್ ಇಳಿಯುತ್ತಿದ್ದಂತೆ ಹಿಡಿದ ಸ್ಥಳೀಯರು, ಹಿಗ್ಗಾ ಮುಗ್ಗಾ ಥಳಿಸಿದ್ದಾರೆ.