ಮಂಗಳೂರು: ಪುಟ್ಟ ಮಗಳೊಂದಿಗೆ ತಂದೆಯೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ.
ಕೌಟುಂಬಿಕ ಕಲಹದಿಂದಾಗಿ ತಂದೆ ಮಗಳಿಗೆ ನೇಣಿನ ಕುಣಿಗೆ ಬಿಗಿದು ಬಳಿಕ ತಾನೂ ನೇಣು ಬಿಗಿದುಕೊಂಡಿದ್ದಾನೆ. ವಿಷಯ ತಿಳಿದ ಕಾವೂರು ಪೊಲೀಸರು ಮನೆಗೆ ನುಗ್ಗಿ ತಂದೆ-ಮಗಳನ್ನು ರಕ್ಷಿಸಿದ್ದಾರೆ.
ಪೊಲೀಸರ ಸಮಯ ಪ್ರಜ್ಞೆಯಿಂದ ಇಬ್ಬರು ಬಚಾವ್ ಆಗಿದ್ದಾರೆ. ಮಂಗಳೂರಿನ ಶಾಂತಿನಗರದ ನಿವಾಸಿ ರಾಜೇಶ್ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ. ಇದಕ್ಕೂ ಮೊದಲು ರಾಜೇಶ್ ತನ್ನ ಮಗಳನ್ನು ಮಂಗಳೂರು ಕಡಲ ತೀರಕ್ಕೆ ಕರೆದೊಯ್ದು ಅಲ್ಲಿಯೂ ಆತ್ಮಹತ್ಯೆಗೆ ಯತ್ನಿಸಿದ್ದ. ಮಗಳು ಅಪ್ಪ, ಬೇಡಪ್ಪ, ಸಾಯೋದು ಬೇಡ ಎಂದು ಹೇಳುತ್ತಿರುವುದನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಈ ವೇಳೆಯೂ ಸ್ಪೊಲೀಸರು ರಾಜೇಶ್ ಮನವೊಲಿಸಿ ಇಬ್ಬರನ್ನೂ ರಕ್ಷಿಸಿ ಮನೆಗೆ ಕಳುಹಿಸಿದ್ದರು. ಇದೀಗ ಮನೆಯಲ್ಲಿಯೇ ಆತ್ಮಹತ್ಯೆಗೆ ಯತ್ನಿಸಿದ್ದ ರಾಜೇಶ್ ಹಾಗೂ ಪುಟ್ಟ ಮಗಳನ್ನು ರಕ್ಷಿಸಿದ್ದಾರೆ.
